ಡೈಲಿ ವಾರ್ತೆ: 03/ಫೆ /2025
“ಜೇಸಿಐ ಕುಂದಾಪುರ ಸುವರ್ಣ ವರ್ಷ 2025 ರ ಪದಗ್ರಹಣ ಸಮಾರಂಭ”
ಕುಂದಾಪುರ : ವಲಯ 15 ರ ಪ್ರತಿಷ್ಟಿತ ಘಟಕ ವಾದ ಜೇಸಿಐ ಕುಂದಾಪುರ ಇದರ 50 ರ ಪದಗ್ರಹಣ ಸಮಾರಂಭವು ಜನವರಿ 28ರಂದು ಜೇಸಿಐ ಭವನ ಕುಂದಾಪುರದಲ್ಲಿ ಜರಗಿತು.
2024 ರ ಅಧ್ಯಕ್ಷರಾದ ಜೇಸಿ ಚಂದನ ಗೌಡ ಅವರು, 2025 ರ ಸುವರ್ಣ ವರ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಜೇಸಿ ಸುಬ್ರಮಣ್ಯ ಆಚಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಮುಖ್ಯ ಅತಿಥಿಯಾಗಿ ಭಾರತೀಯ ಜೇಸಿಸ್ ನ ರಾಷ್ಟೀಯ ಪೂರ್ವ ಉಪಾಧ್ಯಕ್ಷರು,ರಾಷ್ಟೀಯ ತರಬೇತುದರರಾದ ಜೇಸಿ ಸದಾನಂದ ನಾವಡ ಉಪಸ್ಥಿತರಿದ್ದರು.
ಗೌರವಾನ್ವಿತ ಮುಖ್ಯ ಅತಿಥಿಯಾಗಿ ಶ್ರೀಯುತ ಕುಶಾಲ್ ಶೆಟ್ಟಿ,ಮುಖ್ಯ್ಯೋಪಾಧ್ಯಯರು, ಶ್ರೀ ಮೂಕಾಂಬಿಕಾ ಶಾಲೆ, ಮಾವಿನಕಟ್ಟೆ. ಹಾಗೆಯೇ ಜೇಸಿಐ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜೇಸಿ ಗೋಪಾಲ್ ಪೂಜಾರಿ, ಜೇಸಿಐ ರಾಷ್ಟಿಯ ಸಂಯೋಜಕೀಯಾದ ಜೇಸಿ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.
ಜೆಸಿಐ ವಲಯ 15, ಪ್ರಾಂತ್ಯ” ಸಿ ” ನ ಉಪಾಧ್ಯಕ್ಷರ ರಾದ ಜೇಸಿ ಅನ್ವೇಷ ಶೆಟ್ಟಿ ಅವರು ನೂತನ ಅಧ್ಯಕ್ಷರಿಗೆ ಪ್ರತಿಜ್ಞಾ ಸ್ವೀಕಾರ ಬೋಧಿಸಿದರು.
ಅಧಿಕಾರ ಸ್ವೀಕರಿದ ಜೆಸಿ ಸುಬ್ರಮಣ್ಯ ಆಚಾರ್ ಅವರು ಅತಿಥಿಗಳನ್ನು ಸ್ವಾಗತಿಸಿ,ಜೇಸಿಐ ಕುಂದಾಪುರ 2025 ಎಲ್ಲಾ ಪದಾಧಿಕಾರಿಗಳಿಗೆ ಪ್ರತಿಜ್ಞಾ ಸ್ವೀಕಾರ ನೀಡಿದರು.
ಕಾರ್ಯದರ್ಶಿಯಾದ ಪ್ರವೀಣ್ಅವರು ವೇದಿಕೆ ಯಲ್ಲಿ ಅಸಿನರಿದ್ದ ಅತಿಥಿಗಳಿಗೆ ಹಾಗೂ ಜೆಸಿ, ಜೆಸಿಯೇತರ ಬಂಧುಗಳಿಗೆ ಧನ್ಯವಾದ ಅರ್ಪಿಸಿದರು.