ಡೈಲಿ ವಾರ್ತೆ: 03/ಫೆ /2025
ಕಾರ್ಕಳ | ಬಾವನ ಮೇಲೆಯೇ ಭಾಮೈದನಿಂದ ಮಾರಣಾಂತಿಕ ಹಲ್ಲೆ! ವ್ಯಕ್ತಿ ಗಂಭೀರ ಗಾಯ
ಕಾರ್ಕಳ: ಬಾವನ ಮೇಲೆಯೇ ಭಾಮೈದ ಮಾರಾಕಾಸ್ತ್ರದಿಂದ ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ಫೆ. 3 ರಂದು ಸೋಮವಾರ ಕಾರ್ಕಳದ ಶಿವತಿಕೆರೆಯಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ವ್ಯಕ್ತಿ ಮಹಮ್ಮದ್ ರಿಜ್ವಾನ್ ಎಂದು ಗುರುತಿಸಲಾಗಿದೆ.
ಮಹಮ್ಮದ್ ರಿಜ್ವಾನ್ ಎಂಬಾತನಿಗೆ ಆತನ ಹೆಂಡತಿಯ ಅಣ್ಣ ಅಶ್ರಫ್ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದು ಪರಿಣಾಮ ರಿಜ್ವಾನ್ ತಲೆ, ಕುತ್ತಿಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶ್ರಫ್‌ನ ತಂಗಿ ಮೈಮುನಾ 2017ರಲ್ಲಿ ರಿಜ್ವಾನ್‌ನನ್ನು ಮದುವೆಯಾಗಿದ್ದು, ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು 2023 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿಂದೆ ಮೈಮುನಾ ತನ್ನ ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬ ಕುರಿತು ದೂರು ದಾಖಲಾಗಿತ್ತು. ಈ ಪ್ರಕರಣವು ಇದೀಗ ಮತ್ತೊಂದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ.