ಡೈಲಿ ವಾರ್ತೆ: 07/ಫೆ. /2025

ಯುವ ಕಾಂಗ್ರೆಸ್ ರಾಜ್ಯ ಚುನಾವಣೆ: ಗೆದ್ದವರಿಗೆ ಅಭಿನಂದನೆಗಳು, ಸೋತವರಿಗೆ ಸಹಾನುಭೂತಿ – ಕೋಟ ನಾಗೇಂದ್ರ ಪುತ್ರನ್

ಯುವ ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಮಂಜುನಾಥ್ ಎಚ್. ಎಸ್. ಹಾಗೂ ಉಡುಪಿ ಜಿಲ್ಲಾಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಬಜಗೋಳಿ ಅವರು ಅಭೂತಪೂರ್ವ ಜಯ ಗಳಿಸಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಅವರು ವಿಜೇತರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಸೋತ ಕಾಂಗ್ರೆಸ್ ಸ್ಪರ್ಧಿಗಳಿಗೆ ಸಹಾನುಭೂತಿಯನ್ನೂ ತಿಳಿಸಿದ್ದಾರೆ.

ತಮ್ಮ ಅಭಿನಂದನಾ ಹೇಳಿಕೆಯಲ್ಲಿ ಪುತ್ರನ್ ಅವರು, ಗೆದ್ದಿರುವ ರಾಜ್ಯ ಹಾಗೂ ಜಿಲ್ಹಾ ಯುವ ನಾಯಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಹಿನ್ನಡೆ ಆಗಿರುವ ರಾಜ್ಯ ಮತ್ತು ಜಿಲ್ಲಾ ಯುವ ನಾಯಕರು ಪಕ್ಷದ ಬೆನ್ನೆಲುಬಾಗಿ ಕೆಲಸ ಮಾಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಎಲ್ಲರನ್ನು ಗುರುತಿಸಿ ಪಕ್ಷದಲ್ಲಿ ವಿವಿಧ ಹುದ್ದೆ ನೀಡಿ ಗೌರವಿಸಲಿದೆ ಎಂದು ಸಮಾಧಾನ ಹೇಳಿದ್ದಾರೆ.

ಹಿನ್ನೆಡೆ ಆದವರು ಮತ್ತು ಗೆದ್ದವರು ನಮ್ಮದೇ ಕಾಂಗ್ರೆಸ್ ಪಕ್ಷದವರಾಗಿದ್ದು ಗೆಲುವನ್ನು ಸಂಭ್ರಮಿಸಿ, ಹಿನ್ನೆಡೆ ಆದವರನ್ನು ಗೌರವದಿಂದ ನೋಡಿಕೊಂಡು ಹೋಗುವುದು ಯುವ ನಾಯಕರ ಮೇಲೆ ಇರುವ ವಿಶ್ವಾಸ ಎಂದಿರುವ ಅವರು, ಚುನಾವಣೆಯಲ್ಲಿ ಸ್ಪರ್ದಿಸಿದ ಎಲ್ಲರಿಗೂ ಶುಭಾಶಯವನ್ನು ಕೋರಿದ್ದಾರೆ.