


ಡೈಲಿ ವಾರ್ತೆ: 09/ಫೆ. /2025


ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆ, ಮೊದಲ ಸ್ಥಾನದಲ್ಲಿ ಹಾಶೀರ್ ಪೇರಿಮಾರ್

ಬಂಟ್ವಾಳ : ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪುದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಹಾಶೀರ್ ಪೇರಿಮಾರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಎಐಸಿಸಿ ಚುನಾವಣೆ ಸಮಿತಿ ಯುವ ಕಾಂಗ್ರೆಸ್‌ನ ಎಲ್ಲ ಹಂತದ ಘಟಕಗಳಿಗೆ ನೋಂದಣಿ ಮಾಡಿಕೊಂಡಿತ್ತು. ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್ ಘಟಕಗಳ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ ಮತದಾನ ನಡೆದಿತ್ತು.
ಯುವ ಕಾಂಗ್ರೆಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಒಟ್ಟು 20 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದರು.
ಈ ಪೈಕಿ ಹಾಸಿರ್ ಪೆರಿಮಾರ್ ಅವರು 4,667 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರೆ, ಇಬ್ರಾಹಿಂ ಬಾತಿಷಾ ಆತೂರು 4265 ಮತಗಳನ್ನು ಪಡೆದು ಎರಡನೇ ಸ್ಥಾನ, ಮೊಹಮ್ಮದ್ ಉನೈಸ್ 2323 ಮತಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.