


ಡೈಲಿ ವಾರ್ತೆ: 09/ಫೆ. /2025


ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು : ಪೆ.9: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಜಿಲ್ಲಾ ಸಮಿತಿ ಹಾಗೂ ವೆನ್ ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ಪಯೋನಿಯರ್ ಕಾಂಪ್ಲೆಕ್ಸ್ ನ ಎಸ್.ಡಿ.ಟಿ.ಯು ಜಿಲ್ಲಾ ಕಚೇರಿಯ ನೆಲ ಮಹಡಿಯಲ್ಲಿ ರವಿವಾರ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಟಿ.ಯು ಜಿಲ್ಲಾಧ್ಯಕ್ಷರಾದ ಇರ್ಫಾನ್ ಕಾನ ವಹಿಸಿದರು ಪ್ರಸ್ತಾವಿಕವಾಗಿ ಮಾತನಾಡಿದ ಎಸ್.ಡಿ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹಿಮಾನ್ ಬೋಳಿಯಾರ್ ಎಸ್.ಡಿ.ಟಿ.ಯು ಕಾರ್ಮಿಕರ ಪರವಾಗಿ ನಿರಂತರವಾದ ಹೋರಾಟಗಳನ್ನು ಮಾಡುವುದರೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿದರು.
ದಿಕ್ಸೂಚಿ ಬಾಷಣ ಮಾಡಿದ ಎಸ್ಡಿಟಿಯು ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ವೈಜ್ಞಾನಿಕವಾಗಿ ತಂತ್ರಜ್ಞಾನ ಮುಂದುವರಿದರೂ ರಕ್ತಕ್ಕೆ ಪರ್ಯಾಯವಾಗಿ ಕೃತಕ ರಕ್ತವನ್ನು ತಯಾರಿಸಲು ಸಾಧ್ಯವಾಗಿಲ್ಲ ಅದು ಮನುಷ್ಯ ನ ದೇಹದಿಂದಲೇ ರಕ್ತವನ್ನು ದಾನ ರೂಪದಲ್ಲಿ ಪಡೆಯಬೇಕಾಗುತ್ತದೆ ಇದರಿಂದ ಮನುಷ್ಯನಿಗೆ ಮನುಷ್ಯ ಅನಿವಾರ್ಯವಾಗಿ ನೇರವಾಗಲೇಬೇಕಿದೆ ರಕ್ತದಾನ ಸಾಮಾಜಿಕ ಜವಾಬ್ದಾರಿಯಾಗಿದ್ದು ಜೀವಧಾನವಾಗಿದೆ ಎಂದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಹಾಯಕ ಆಯುಕ್ತರು ಕಾರ್ಮಿಕ ಇಲಾಖೆ ಮಂಗಳೂರಿನ ಅಧಿಕಾರಿ ನಾಜಿಯಾ ಸುಲ್ತಾನರು ಎಸ್.ಡಿ.ಟಿ.ಯು ಸಂಘಟನೆಯ ಕಾರ್ಯ ವೈಖರಿಯ ಬಗ್ಗೆ ಪ್ರಶಂಸಿಸುತ್ತ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವೆಗಳನ್ನು ಮಾಡಲು ಪ್ರೇರೇಪಿಸಿದರು.
ಎಸ್ಡಿಟಿಯು ಕಾಸರಗೋಡ್ ಜಿಲ್ಲಾಧ್ಯಕ್ಷ ಹಮೀದ್ ಮಂಜೇಶ್ವರ, ಆಟೋ ರಿಕ್ಷಾ ಚಾಲಕ ಮಾಲಕ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಭರತ್ ಕುಮಾರ್ ಮಾತನಾಡಿದರು.,
ಬಂದರು ಪೋಲಿಸ್ ಠಾಣಾಧಿಕಾರಿ ಅಜ್ಮತ್ ಅಲಿ, ವೈದ್ಯರಾದ ಮೂಲೆ ಚಿಕಿತ್ಸಕ ಮೊಹಮ್ಮದ್ ಶಮೀರ್, ಜೆನ್ಯೂನ್ ಫರ್ನೀಚರ್ ಮಾಲಕರಾದ ಸಮದ್, ಪರಂಗೀಫೇಟೆ ನಂ 1 ರಿಕ್ಷಾ ಪಾರ್ಕ್ ಚಾಲಕ ಮಾಲಕ ಸಂಘದ ಅಧ್ಯಕ್ಷ ಫಾರೂಕು ಸುಜೀರ್, ಮಂಗಳೂರು ಬೀದಿ ಬದಿ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಅಸಿಫ್, ಎಸ್.ಡಿ.ಟಿ.ಯು ಮಂಗಳೂರು ನಗರ ಏರಿಯಾ ಅಧ್ಯಕ್ಷರಾದ ಇಕ್ಬಾಲ್ ಬಿಪಿ, ಆಟೋ ಯುನಿಯನ್ ಮಂಗಳೂರು ನಗರಾಧ್ಯಕ್ಷರಾದ ಇಲ್ಯಾಸ್ ಬೆಂಗ್ರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮುಸ್ತಫಾ ಪರ್ಲಿಯಾ ಸ್ವಾಗತಿಸಿ ಅನ್ಸಾರ್ ಕುದ್ರೋಳಿ ನಿರೂಪಿಸಿದರು.