

ಡೈಲಿ ವಾರ್ತೆ: 14/ಫೆ. /2025


ಭೀಮಾತೀರದ ಬಾಗಪ್ಪ ಹರಿಜನ್ ಕೊಲೆ ಪ್ರಕರಣ| ನಾಲ್ವರು ಆರೋಪಿಗಳ ಬಂಧನ

ವಿಜಯಪುರ: ಭೀಮಾತೀರದ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣದ ಹಂತಕರಾದ ಪಿಂಟ್ಯಾ ಅಗರಖೇಡ್ ಸೇರಿ ನಾಲ್ವರನ್ನು ಗಾಂಧಿಚೌಕ ಪೊಲೀಸರು ಬಂಧಿಸಿದ್ದಾರೆ.
ಎ1 ಆರೋಪಿ ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), ಎ2 ರಾಹುಲ್ ತಳಕೇರಿ (20), ಎ3 ಗದಿಗೆಪ್ಪ ಅಲಿಯಾಸ್ ಮಣಿಕಂಠ ದನಕೊಪ್ಪ (27), ಎ4 ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು.
ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ಹಟ್ಟಿ, ಡಿವೈಎಸ್ಪಿ ಬಸವರಾಜ್ ಎಲಿಗಾರ್, ಸಿಪಿಐ ಪ್ರದೀಪ್ ತಳಕೇರಿ, ಪಿಎಸ್‌ಐ ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಕೇವಲ 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಆರೋಪಿ ಪಿಂಟ್ಯಾ, 2024 ಅಕ್ಟೋಬರ್ 8ರಂದು ಬಾಗಪ್ಪನ ಶಿಷ್ಯನಿಂದ ಹತನಾಗಿದ್ದ ರವಿ ಅಗರಖೇಡ್‌ನ ತಮ್ಮ. ಪಿಂಟ್ಯಾ ಸೇರಿ ಬಂಧಿತರೆಲ್ಲರೂ ಗೆಳೆಯರಾಗಿದ್ದರು.