

ಡೈಲಿ ವಾರ್ತೆ: 14/ಫೆ. /2025


ಕಳ್ಳರ ಹಾವಳಿಗೆ ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು!

ಬಾಗಲಕೋಟೆ: ಮನೆಗಳ್ಳರ ಹಾವಳಿಗೆ ಬೇಸತ್ತ ಮಹಿಳೆಯರು ಒನಕೆ ಓಬವ್ವನ ರೂಪ ತಾಳಿ ಗಮನ ಸೆಳೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.
ನಗರದ ಜಯನಗರ ನಿವಾಸಿಗಳೇ ಓಬವ್ವನ ರೂಪ ತಾಳಿದ ಮಹಿಳೆಯರು. ಕಳ್ಳರ ಕಾಟದಿಂದ ಬೇಸತ್ತ ಮಹಿಳೆಯರು, ರಾತ್ರಿಪೂರ್ತಿ ಬಡಿಗೆ ಹಿಡಿದು ಬಡಾವಣೆಯಲ್ಲಿ ಗಸ್ತು ತಿರುಗಿ ಗಮನ ಸೆಳೆದಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಜಯನಗರದಲ್ಲಿ ಎರಡು ಮನೆಗಳ ಕಳ್ಳತನವಾಗಿದ್ದರೆ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಇದರಿಂದ ಅಲರ್ಟ್ ಆದ ಮಹಿಳೆಯರು ಪೊಲೀಸರನ್ನು ನಂಬದೇ, ರಾತ್ರಿ ಪೂರ್ತಿ ಬಡಿಗೆ ಹಿಡಿದು ತಮ್ಮ ಬಡಾವಣೆ ರಕ್ಷಣೆಗೆ ಮುಂದಾಗಿದ್ದಾರೆ.
ಬಡಾವಣೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಬಂದರೆ ವಿಚಾರಿಸಿ ನಂತರ ಅವರನ್ನು ಬಡಾವಣೆ ಒಳಗಡೆ ಬಿಟ್ಟುಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಜಯನಗರ ಬಡಾವಣೆಯಲ್ಲಿ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ವ್ಯಕ್ತಿಗಳ ಥಳಿಸಿ ಪೊಲೀಸರಿಗೂ ಒಪ್ಪಿಸಿದ್ದಾರೆ.