ಡೈಲಿ ವಾರ್ತೆ: 15/ಫೆ. /2025

ಬಂಟ್ವಾಳ : ಪೆ. 21 ರಂದು ವಕ್ಫ್, ಅಲ್ಪಸಂಖ್ಯಾತ ಇಲಾಖಾ ಸೌಲಭ್ಯಗಳ ಮಾಹಿತಿ ಮತ್ತು ಸಂವಾದ

ಬಂಟ್ವಾಳ : ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಇದರ ವತಿಯಿಂದ ಅಲ್ಪಸಂಖ್ಯಾತ ಇಲಾಖಾ ಸೌಲಭ್ಯಗಳ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಪೆ. 21 ಶುಕ್ರವಾರದಂದು ಮದ್ಯಾಹ್ನ 2.30 ಕ್ಕೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಉದ್ಘಾಟಿಸಲಿದ್ದು, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸುವರು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜೀಬುಲ್ಲಾ ಜಫಾರಿ ಕೆಎಎಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಉಪಸ್ಥಿತರಿರುವರು.

ಸಂಯುಕ್ತ ಜಮಾಅತ್ ನ ನಿರಂತರ ಆರ್ಥಿಕ ನೆರವು ಸ್ವೀಕರಿಸುತ್ತಿರುವ ಕಿಡ್ನಿ ರೋಗಿಗಳಿಗೆ ನೆರವಿನ ಚೆಕ್ ಹಸ್ತಾಂತರ, ಕಿಟ್ ವಿತರಣೆ ಹಾಗೂ ಮಂಗಳ ಕಿಡ್ನಿ ಫೌಂಡೇಶನ್ ನಿರ್ದೇಶಕ ಮತ್ತು ಮೂತ್ರ ಪಿಂಡ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಮೊಯ್ದಿನ್ ನಫ್ಸೀರ್ ಅವರಿಂದ ವೈದ್ಯಕೀಯ ಮಾರ್ಗದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಸಂಯುಕ್ತ ಜಮಾಅತ್ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.