![](https://dailyvarthe.com/wp-content/uploads/2025/02/IMG-20250217-WA0176.jpg)
![](https://dailyvarthe.com/wp-content/uploads/2025/02/24x33_Add_PUCollegeSchool-scaled.jpg)
![](https://dailyvarthe.com/wp-content/uploads/2025/02/1001408545-1024x575.jpg?v=1739681981)
ಡೈಲಿ ವಾರ್ತೆ: 16/ಫೆ. /2025
![](https://dailyvarthe.com/wp-content/uploads/2025/02/IMG-20250205-WA0168-1.jpg)
![](https://dailyvarthe.com/wp-content/uploads/2024/10/IMG-20241023-WA0255-scaled.jpg)
ಕಾರ್ಕಳ| ಚಾರ್ಚ್‌ಗಿಟ್ಟ ಮೊಬೈಲ್ ಸ್ಪೋಟಗೊಂಡು ಅಪಾರ ಹಾನಿ
ಕಾರ್ಕಳ:ನಗರದ ತೆಳ್ಳಾರು ರಸ್ತೆ 11ನೇ ಕ್ರಾಸ್‌ನ ಮರತ್ತಪ್ಪ ಶೆಟ್ಟಿ ಕಾಲನಿಯ ಕಿಶೋರ್ ಕುಮಾರ್ ಶೆಟ್ಟಿ ಅವರ ಮನೆಯಲ್ಲಿ ಚಾರ್ಜ್‌ಗಿಟ್ಟ ಮೊಬೈಲ್ ಸ್ಫೋಟಗೊಂಡು ಇಡೀ ಮನೆ ಸುಟ್ಟುಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.
ಎರಡು ಅಂತಸ್ತುಗಳ 6 ಕೋಣೆಗಳ ಮನೆಯಲ್ಲಿ ಮುಂಜಾನೆ 4 ಗಂಟೆ ವೇಳೆಗೆ ಅವಘಡ ಸಂಭವಿಸಿದೆ. ಮೊಬೈಲನ್ನು ಸೋಫಾದ ಮೇಲೆ ಇರಿಸಿದ್ದ ಕಾರಣ ಸ್ಪೋಟಗೊಂಡ ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ಮನೆಯನ್ನು ಆವರಿಸಿತು. ಮಾಹಿತಿ ತಿಳಿದ ತತ್‌ಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಈ ವೇಳೆ ಮನೆಯಲ್ಲಿ ಎಸಿ ಆನ್ ಇದ್ದುದು ಕೂಡ ಬೆಂಕಿ ವ್ಯಾಪಿಸಲು ಕಾರಣವಾಯಿತು ಎನ್ನಲಾಗಿದೆ.
ಮನೆಯ ಮಾಲಕ ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಬೆಂಕಿಯಿಂದ ಸಣ್ಣಪುಟ್ಟ ಗಾಯಗಳಾಗಿವೆ.