

ಡೈಲಿ ವಾರ್ತೆ: 17/ಫೆ. /2025


ಕಾಟಿಪಳ್ಳ| ಬೃಹತ್ ರಕ್ತದಾನ ಶಿಬಿರ

ಕಾಟಿಪಳ್ಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, 3ನೇ ವಾರ್ಡ್ ಕಾಟಿಪಳ್ಳ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ , ಮಂಗಳೂರು.
ಇವರ ಸಹಯೋಗದಲ್ಲಿ ಪಿ ಎಚ್ ಇದ್ದಿನಬ್ಬ ಮತ್ತು ಪಿ ಕೆ ಮೊಯಿದಿನ್ ರವರ ಸ್ಮರಣಾರ್ಥ ಫೆ. 16 ರಂದು
ಆದಿತ್ಯವಾರ ಜಾಸ್ಮಿನ್ ಮಹಲ್ ಕಾಟಿಪಳ್ಳದಲ್ಲಿ ಬ್ರಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಮಹಿಳೆಯರು ರಕ್ತದಾನ ಮಾಡಿರುವುದು ವಿಶೇಷವಾಗಿತ್ತು. ಸುಮಾರು 66 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಕಾಟಿಪಳ್ಳದಲ್ಲಿ ನಡೆದ ಕಾರ್ಯಕ್ರಮ ಖಾದರ್ ಕಾಟಿಪಳ್ಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಸ್ಸಯ್ಯದ್ ಇಸ್ಮಾಯಿಲ್ ಅಲ್ ಬುಖಾರಿಯವರ ದುವಾ ದೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ಲಡ್ ಅಧಿಕಾರಿ ಅಭಯ್ ನಾಯಕ್ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ , ಎಸ್ ಡಿ ಪಿ ಐ ಮಾಜಿ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ,ಅತಿಥಿಗಳಾಗಿ ಬಿಲಾಲ್ (ಪಿ ಕೆ ಮೊಯಿದಿನ್ ಕುಟುಂಬ ಸದಸ್ಯರು), 50ನೇ ಬಾರಿ ರಕ್ತದಾನ ಮಾಡಿದ ಶಂಶೀರ್ ಕಾಟಿಪಳ್ಳರವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. SDPI ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಫಯಾಜ್ ಸುಲ್ತಾನ್ ಸ್ವಾಗತ ಭಾಷಣ ಮಾಡಿದರು. sdpi 3ನೇ ವಾರ್ಡ್ ಜೊತೆ ಕಾರ್ಯದರ್ಶಿ ನಿಶಾದ್ ವಂದನಾರ್ಪಣೆಗೈದರು ಮತ್ತು ತೌಕೀರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.