

ಡೈಲಿ ವಾರ್ತೆ: 17/ಫೆ. /2025


ಮೊಬೈಲ್ ಕಿಂಗ್ಸ್ ಕುಂದಾಪುರದ ಲಕ್ಕಿ ಡ್ರಾ. ದ ವಿಜೇತರಿಗೆ ಬೈಕ್ ಹಸ್ತಾಂತರ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆಗೆ ಸನ್ಮಾನ

ಕುಂದಾಪುರ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮೊಬೈಲ್ ಅಸೋಸಿಯೇಷನ್ ಆಯೋಜಿಸಿದ್ದ ಲಕ್ಕಿ ಡ್ರಾ ‘ನಲ್ಲಿ ಮೊಬೈಲ್ ಕಿಂಗ್ಸ್ ಕುಂದಾಪುರದಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆದು ಲಕ್ಕಿಡ್ರಾ ದಲ್ಲಿ ಬಂಪರ್ ಬಹುಮಾನ ಬೈಕ್ ಪಡೆದ ವಿಜೇತರಿಗೆ ಫೆ. 17 ರಂದು ಸೋಮವಾರ ಕುಂದಾಪುರ ಮೊಬೈಲ್ ಕಿಂಗ್ಸ್ ನಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಬೈಕ್ ವಿತರಿಸಲಾಯಿತು.

ಕುಂದಾಪುರ ಮೊಬೈಲ್ ಕಿಂಗ್ಸ್ ವ್ಯವಸ್ಥಾಪಕರಾದ ಸಲ್ಮಾನ್ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಸೇರಿ ಬೈಕ್ ವಿಜೇತರಾದ ಅನಿಲ್ ಕುಂದಾಪುರ ಅವರಿಗೆ ಬೈಕ್ ಕೀ ಯನ್ನು ಹಸ್ತಾಂತರಿಸಲಾಯಿತು.
ಬಹುಮಾನ ಸ್ವೀಕರಿಸಿದ ವಿಜೇತರು ಸಂತಸ ವ್ಯಕ್ತಪಡಿಸಿದರು.

ಮೊಬೈಲ್ ಕಿಂಗ್ಸ್ ಸಂಸ್ಥೆಯ ವ್ಯವಸ್ಥಾಪಕ ಸಲ್ಮಾನ್ ಮಾತನಾಡಿ ನಮ್ಮ ಮೊಬೈಲ್ ಕಿಂಗ್ಸ್ ಕುಂದಾಪುರದಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆಯಿರಿ.
ಪ್ರತಿ ಮೂರು, ಹಾಗೂ ಆರು ತಿಂಗಳಿಗೊಮ್ಮೆ ನಡೆಯುವ ಲಕ್ಕಿ ಡ್ರಾ ನಲ್ಲಿ ಸ್ಮಾರ್ಟ್ ಟಿವಿ, ಏರ್ ಕಂಡೀಷನರ್, ಬ್ಲೂಟೂತ್ ಸ್ಪೀಕರ್, ಮಿಕ್ಸರ್ ಗ್ರೈಂಡರ್ ಹಾಗೂ ಬಂಪರ್ ಬಹುಮಾನ ಗೆಲ್ಲಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಸಲ್ಮಾನ್ ಹಾಗೂ ಅತಿಥಿಗಳು ಸೇರಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ವಾಲಿಬಾಲ್ ಆಟಗಾರ ನವೀನ್ ಕಾಂಚನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಾಕೂಬ್ ಗುಲ್ವಾಡಿ,ಉದ್ಯಮಿ ಫಾರೂಕ್ ಉಪಸ್ಥಿತರಿದ್ದು ಸಂಸ್ಥೆಗೆ ಹಾಗೂ ವಿಜೇತರಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಪಂಚಮಿ ಕೃಷ್ಣ ನಿರೂಪಿಸಿ ವಂದಿಸಿದರು.