ಡೈಲಿ ವಾರ್ತೆ: 18/ಫೆ. /2025

ಕೋಟ| ಹೆದ್ದಾರಿಯ ಮಧ್ಯದಲ್ಲೆ ಮೂಟೆಗಟ್ಟಲೆ ತ್ಯಾಜ್ಯ ಎಸೆದ ಕಿಡಿಗೆಡಿಗಳು – ಸಾರ್ವಜನಿಕರ ಆಕ್ರೋಶ

ಕೋಟ: ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿ 66ರ ಮಧ್ಯದಲ್ಲೆ ಕಿಡಿಗೆಡಿಗಳು ಮೂಟೆಗಟ್ಟಲೆ ತ್ಯಾಜ್ಯ ಎಸೆದ ಘಟನೆ ಕಳೆದ ಎರಡು ದಿನಗಳಿಂದ ನಡೆದಿದೆ.

ಸೋಮವಾರ ರಾತ್ರಿ ಬೆಳಗಾಗುವದರೊಳಗೆ ಒಂದು ಬಾರಿ ಗಾತ್ರದ ತ್ಯಾಜ್ಯದ ಚೀಲ ಕಾಣಸಿಕೊಂಡಿತ್ತು. ಮರುದಿನ ಮಂಗಳವಾರ ಮುಂಜಾನೆಯೊಳಗೆ ಮತ್ತೆ ಮೂರು ಬಾರಿ ಗಾತ್ರದ ತ್ಯಾಜ್ಯದ ಚೀಲ ಅದೇ ಡಿವೈಡರ್ ಮಧ್ಯದಲ್ಲಿ ಕಾಣಸಿಕೊಂಡಿದೆ.

ಈ ಬಗ್ಗೆ ಸ್ಥಳೀಯರು ಭಯಭೀತರಾಗಿದ್ದು ದಿನದಿಂದ ದಿನಕ್ಕೆ ಏರುತ್ತಿರುವ ತ್ಯಾಜ್ಯದ ಚೀಲದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ, ಇದನ್ನು ಗಮನಿಸಿದ ಕೋಟದ ಪಂಚವರ್ಣ ಸಂಘಟನೆ ಅಧ್ಯಕ್ಷ ಮನೋಹರ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಕೆ.ಕೆ ಆರ್ ಕಂಪನಿ ಹಾಗೂ ಕೋಟ ಗ್ರಾಮಪಂಚಾಯತ್ ಮಾಹಿತಿ ನೀಡಿದ್ದಾರೆ.

ಸಿಸಿ ಕ್ಯಾಮರ ಅಳವಡಿಸಿ...ಈ ಕಸದ ಚೀಲ ಹೆದ್ದಾರಿಯ ನಡು ಮಧ್ಯದಲ್ಲಿ ತ್ಯಾಜ್ಯ ಇರಿಸುವ ಕಿಡಿಗೆಡಿಗಳನ್ನು ಕಂಡುಹಿಡಿಯು ಸಿಸಿ ಕ್ಯಾಮರ ಅಳವಡಿಸಲು ಸಂಬಂಧಪಟ್ಟ ಸ್ಥಳೀಯಾಡಳಿತ ಅಥವಾ ಕೆ.ಕೆ ಆರ್ ಕಂಪನಿಗೆ ಸ್ಥಳೀಯರು ಮತ್ತು ಸಂಘಸಂಸ್ಥೆಗಳು ಆಗ್ರಹಿಸಿದ್ದಾರೆ.