

ಡೈಲಿ ವಾರ್ತೆ: 19/ಫೆ. /2025


ಕ್ರಿಕೆಟ್ ಬುಕ್ಕಿಗಳ ವಿರುದ್ಧ ಕಾನೂನು ಕ್ರಮಕ್ಕೆ ಹಾಗೂ ಕೋಟ ಆರಕ್ಷಕ ಠಾಣೆಗೆ ಉತ್ತಮ ಗುಣಮಟ್ಟದ ವಾಹನ ನೀಡುವಂತೆ ಕೋಟ ನಾಗೇಂದ್ರ ಪುತ್ರನ್ ಮನವಿ

ಉಡುಪಿ: ಜಿಲ್ಲೆಯಲ್ಲಿ ಅಕ್ರಮ ದಂಧೆ ಹಾಗೂ ಕ್ರಿಕೆಟ್ ಬುಕ್ಕಿಗಳ ಸಂಖ್ಯೆ ಹೆಚ್ಚಾಗಿದ್ದು ಕ್ರಿಕೆಟ್ ಬುಕ್ಕಿಗಳು ರಾಜರೋಷವಾಗಿ ತಿರುಗುತ್ತಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ ಗೆ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸೋತವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಿದಿದ್ದರೆ ಅಮಾಯಕರು ಬಲಿಯಾಗುವುದ ಖಂಡಿತ
ಆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಅವರು
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಮನವಿ ಸಲ್ಲಿಸಿ ಐಪಿಎಲ್ ಕ್ರಿಕೆಟ್ ಆರಂಭವಾಗಿದ್ದು ಯುವಕರು ದಾರಿ ತಪ್ಪಿ ಕ್ರಿಕೆಟ್ ಬುಕ್ಕಿಯವರ ಬಲೆಗೆ ಬಿದ್ದು ಆಪ್ಸ್ ಗಳ ಮೂಲಕ ಆಟ ಆಡಿ ತಮ್ಮ ಜೀವ ಕಳೆದು ಕೊಂಡು ನಂಬಿದ ಸಂಸಾರವನ್ನು ದಾರಿಮೇಲೆ ಹಾಕುವ ಪರಿಸ್ಥಿತಿ ಎದುರಾಗಿದ್ದು,ಕೋಟ್ಯಂತರ ರೂಪಾಯಿಯನ್ನು ಬುಕ್ಕಿಗಳು ಅಡ್ಡ ದಾರಿಯಲ್ಲಿ ಸಂಪಾದನೆ ಮಾಡಿ ಅಕ್ರಮ ಚಟುವಟಿಕೆ ಯಲ್ಲಿ ನಿರಂತರ ಹಣ ಸಂಪಾದನೆ ಮಾಡುತ್ತಿದ್ದು ಜಿಲ್ಲೆಯ ಎಲ್ಲಾ ಬುಕ್ಕಿಗಳು ಹಾಗೂ ಗ್ರಾಮ ಮಟ್ಟದಲ್ಲಿ ಆಪ್ಸ್ ಗಳನ್ನು ನಡೆಸುವ ಎಲ್ಲರ ಮೇಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೆ ಈ ವೇಳೆ ಕೋಟ ಆರಕ್ಷಕ ಠಾಣೆಗೆ ಉತ್ತಮ ಗುಣಮಟ್ಟದ ಪೊಲೀಸ್ ವಾಹನ ನೀಡುವಂತೆ ಕೇಳಿಕೊಂಡರು.
ಕೋಟ ಪೊಲೀಸ್ ಠಾಣೆ ವಾಪ್ತಿ ಸುಮಾರು 30 ಗ್ರಾಮ ಗಳನ್ನು ಒಳಗೊಂಡಿದ್ದು ಅಕ್ರಮ ಚಟುವಟಿಕೆ ಗಳು ನಡೆಯುವ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ದಾವಿಸಲು ಕಷ್ಟ ಆಗುತ್ತಿರುದು ಕಂಡು ಬರುತ್ತಾ ಇದೆ. ಆದ್ದರಿಂದ ಒಂದು ಒಳ್ಳೆಯ(condition)ಇರುವ ಪೊಲೀಸ್ ವಾಹನ ಕೋಟ ಠಾಣೆಗೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಬನ್ನಾಡಿ, ಚೇತನ್ ಕೋಟ, ವಿಷ್ಣು ಉಪ್ಲಾಡಿ ಉಪಸ್ಥಿತರಿದ್ದರು.