ಡೈಲಿ ವಾರ್ತೆ: 19/ಫೆ. /2025

ಮಾದಕವ್ಯಸನದ ದುಷ್ಪರಿಣಾಮಗಳ ಜಾಗ್ರತಿ ಕಾರ್ಯಾಗಾರ: ಆಧುನಿಕತೆಯ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿ ಜೀವನ ಬದಲಾವಣೆ ಆಗುತ್ತಿದೆ – ಪೊಲೀಸ್ ಉಪನಿರೀಕ್ಷಿಕ ನಂಜ ನಾಯಕ್

ಆಧುನಿಕತೆಯ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿ ಜೀವನ ಬದಲಾವಣೆ ಆಗುತ್ತಿದೆ. ಹಲವು ರೀತಿಯ ಆಮಿಷ ಗಳಿಗೆ ತುತ್ತಾಗಿ,ವಿದ್ಯಾರ್ಥಿಗಳು, ಯುವ ಜನರು ಮಾದಕವ್ಯಸನದಂತ ದುಶ್ಚಟಕ್ಕೆ ಬಲಿಯಾಗುತ್ತಾ ಇದ್ದಾರೆ.
ಇದರಿಂದ ಸಮಾಜದಲ್ಲಿ ವೈಪರೀತ್ಯ ಉಂಟಾಗುತ್ತಿದೆ
ವಿದ್ಯಾರ್ಥಿ ಜೀವನ ದುಶ್ಚಾಟಗಳಿಂದ ಮುಕ್ತವಾಗಬೇಕಾದರೆ ಇಂಥ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಎಂದು ಕುಂದಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂಜ ನಾಯ್ಕ್ ಹೇಳಿದರು.

ಬುಧವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಸಭಾಂಗಣದಲ್ಲಿ ಮಾದಕವ್ಯಸನದ ದುಷ್ಪರಿಣಾಮಗಳು ಜನಜಾಗ್ರತಿ ಕಾರ್ಯಕ್ರಮ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್ ಎಸ್ ಎಸ್ ಘಟಕ ,ಎನ್ ಎನ್ ಒ ಕಮ್ಯುನಿಟಿ ಸೆಂಟರ್ ಕುಂದಾಪುರ, ಹಾಗು ಜೆ ಸಿ ಐ ಕುಂದಾಪುರ ಸಿಟಿ ಇವರ ಸಹಯೋಗದಲ್ಲಿ ಜಾಗ್ರತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಂಡಾರ್ಕಾರ್ಸ್ ಕಾಲೇಜ್ ನ ಪ್ರಾಂಶುಪಾಲರಾದ ಡಾ.ಶುಭಕರ್ ಆಚಾರಿ ಅಧ್ಯಕ್ಷ ತೆ ವಹಿಸಿ ಉತ್ತಮವಾದ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವoತೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ
ಮಾನಸಿಕ ತಜ್ಞರಾದ ಡಾ|ಪ್ರಕಾಶ್ ತೋಳಾರ್ ಮಾದಕ ವ್ಯಸನದ ಕಾರಣಗಳು,ವಿವಿಧ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಹಾಗೂ ಇವುಗಳಿಂದ ಹೇಗೆ ತಮ್ಮನ್ನು ಹಾಗೂ ಮಾದಕ ವ್ಯಸನಿಗಳನ್ನು ರಕ್ಷಿಸಬಹುದು, ಇವುಗಳಿಂದ ದೂರವಿರಲು ಅನುಸರಿಸಬೇಕಾದ ಜೀವನಕ್ರಮಗಳನ್ನು ವಿವರವಾಗಿ ತಿಳಿಸಿದರು.
ಎನ್ ಎನ್ ಒ ಕಮ್ಯುನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಊರುಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು , ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ ಎಮ್ ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಹತ್ವಾರ್ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷರಾದ ಯೂಸುಫ್ ಸಲೀಮ್,ನಿಕಟ ಪೂರ್ವ ಅಧ್ಯಕ್ಷ ರಾಘವೇಂದ್ರ ಕುಲಾಲ್, ಪೂರ್ವ ಅಧ್ಯಕ್ಷೆ ಡಾ ಸೋನಿ, ಎನ್ ಎಸ್ ಎಸ್ ಯೋಜಾನಾಧಿಕಾರಿಗಳಾದ ಶ್ರೀ ಅರುಣ್ ಏ ಎಸ್. ಹಾಗೂ ಶ್ರೀ ರಾಮಚಂದ್ರ ಆಚಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಏನ್ ಎಸ್ ಎಸ್ ವಿದ್ಯಾರ್ಥಿಗಳಾದ ಸಮೀಕ್ಷಾ ಸ್ವಾಗತಿಸಿ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ಕಿಶನ್ ಧನ್ಯವಾದ ನೀಡಿದರು.