

ಡೈಲಿ ವಾರ್ತೆ: 20/ಫೆ. /2025


ಉಡುಪಿ|ಆರ್ವಿ ಟೂರ್ಸ್ ಎಂಡ್ ಟ್ರಾವೆಲ್ಸ್ ಮಾಲೀಕ ರಾಘವೇಂದ್ರ ಭಂಡಾರಿ ಹೃದಯಾಘಾತದಿಂದ ಮೃತ್ಯು

ಉಡುಪಿ : ಮಣಿಪಾಲದ ಆರ್ವಿ ಟೂರ್ಸ್ ಎಂಡ್ ಟ್ರಾವೆಲ್ಸ್ ಮಾಲಕ ಪರ್ಕಳ ಸಮೀಪದ ಅಚ್ಚುತನಗರ ಗ್ಯಾಡ್ಸನ್ ನಿವಾಸಿ ಕೆ. ರಾಘವೇಂದ್ರ Andhra (44) ಹೃದಯಾಘಾತಗೊಂಡು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಫೆಬ್ರವರಿ 19 ರಂದು ಸಾವನ್ನಪ್ಪಿದ್ದಾರೆ.
ಬಂಟ್ವಾಳದ ವಿಟ್ಲ ಕರಿಂಕ ಮಾಜಿ ಸೈನಿಕ ಕೆ.ಎನ್. ಶಾಂಭ ಭಂಡಾರಿಯವರ ಪುತ್ರರಲ್ಲಿ ಒಬ್ಬನಾದ ಇವರು ಕಳೆದ 15 ವರ್ಷಗಳಿಂದ ಮಣಿಪಾಲದಲ್ಲಿ ಟ್ರಾವೆಲ್ಸ್ ಉದ್ಯಮ ಆರಂಭಿಸಿದ್ದರು.
ಪೂವರಿ ಪತ್ರಿಕೆಯ ಮೊದಲ ಖರೀಧಿದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಘವೇಂದ್ರ ಭಂಡಾರಿಯವರು ತಾಯಿ ಕೆ. ಸರೋಜ ಎಸ್. ಭಂಡಾರಿ, ಪತ್ನಿ ಶ್ರೀಮತಿ ಅಕ್ಷತಾ, ಮಗಳು ಕು. ಆರ್ವಿ, ತಮ್ಮ ಹೇಮಂತ್ ಕೆ. ಪರ್ಕಳ, ಸಹೋದರಿಯರಾದ ಶ್ರೀಮತಿ ಗಾಯತ್ರಿ ಹೆಬ್ಬಾರಬೈಲು, ಶ್ರೀಮತಿ ಅಕ್ಷತಾ ಹೆಬ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ಇಂದ್ರಾಳಿಯ ರುದ್ರ ಭೂಮಿಯಲ್ಲಿ ನಡೆಯಿತು.