

ಡೈಲಿ ವಾರ್ತೆ: 20/ಫೆ. /2025


ಅಕ್ರಮ ಗಾಂಜಾ ಸಾಗಾಟ| ತಂದೆ, ಮಗಳು, ಮೊಮ್ಮಗ ಸೇರಿ ಐವರ ಬಂಧನ

ಚಿಕ್ಕಬಳ್ಳಾಪುರ| ತಂದೆ, ಮಗಳು, ಮೊಮ್ಮಗ ಎಲ್ಲರೂ ಮಾದಕವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರು ಬಂಧಿಸಿರ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗರಿಗೆರೆಡ್ಡಿಪಾಳ್ಯಾ ನಿವಾಸಿಗಳಾಗಿರುವ ಮಾರಪ್ಪ, ಮಾರಪ್ಪನ ಮಗಳು ದೇವಮ್ಮ, ದೇವಮ್ಮನ ಮಗ ಆಂಜಿಯನ್ನು ಸದ್ಯ ಪೊಲೀಸರು ಬಂಧಿಸದ್ದಾರೆ.
ರಾತ್ರೋರಾತ್ರಿ ಶ್ರೀಮಂತರಾಗುವ ಕನಸ್ಸು ಕಂಡು ಅಕ್ರಮವಾಗಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಮಹಿಂದ್ರಾ ಎಕ್ಸ್ ಯುವಿ 500 ಕಾರಿನಲ್ಲಿ 17 ಲಕ್ಷದ 50 ಸಾವಿರ ರೂ. ಮೌಲ್ಯದ 35 ಕೆಜಿ ಗಾಂಜಾವನ್ನ ಸಾಗಾಟ ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರ ಅತಿಥಿಗಳಾಗಿದ್ದಾರೆ.
ಇನ್ನೂ ಬಂಧಿತ ಮಾರಪ್ಪ, ದೇವಮ್ಮ, ಆಂಜಿ ಜೊತೆ ಅವರ ಕಾರಿನಲ್ಲಿದ್ದ ಆದಿನಾರಾಯಣ, ವೆಂಕಟರಮಣನನ್ನು ಬಂಧಿಸಲಾಗಿದೆ. ತಂದೆ, ಮಗಳು, ಮೊಮ್ಮಗನ ಮೇಲೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಸೇರಿದಂತೆ ತುಮಕೂರು ಜಿಲ್ಲೆಗಳಲ್ಲಿ ಗಾಂಜಾ ಮಾರಾಟ, ಸಾಗಟದ ಕೇಸ್ಗಳಿವೆ. ಆದರೂ ಬುದ್ದಿ ಕಲಿಯದ ಇವರು ಜೈಲಿಗೆ ಹೋಗುವುದು ಮತ್ತೆ ಜಾಮೀನು ಮೇಲೆ ಆಚೆ ಬರುವುದು, ಗಾಂಜಾ ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರಂತೆ.