ಡೈಲಿ ವಾರ್ತೆ: 21/ಫೆ. /2025

ಬಾಳೆಹಣ್ಣು ತಿನ್ನೋದರಿಂದ ಅರೋಗ್ಯಕ್ಕೆ ಪ್ರಯೋಜನಗಳು

ವರ್ಷದ ಯಾವುದೇ ಸೀಸನ್​ನಲ್ಲಾದ್ರೂ ಸಿಗೋ ಹಣ್ಣು ಎಂದರೆ ಅದು ಬಾಳೆಹಣ್ಣು. ಎಲ್ಲ ಹಣ್ಣುಗಳಿಗೆ ಹೋಲಿಕೆ ಮಾಡಿದ್ರೂ ಮಾರ್ಕೆಟ್​ನಲ್ಲಿ ಇದರ ದರ ಸ್ವಲ್ಪ ಕಡಿಮೆಯೇ ಇರುತ್ತದೆ. ಹೀಗಾಗಿ ಪಟ್ಟಣಕ್ಕೆ ಹೋಗಿ ವಾಪಸ್​ ಬರುವಾಗ ಒಂದು ಡಜನ್ ಬಾಳೆಹಣ್ಣು ತರುವುದು ಈಗಲೂ ಹಳ್ಳಿಗಳಲ್ಲಿ ವಾಡಿಕೆ. ಈ ಬಾಳೆಹಣ್ಣು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು.

ಬಾಳೆಹಣ್ಣಿನಲ್ಲಿ ಟ್ರಿಪ್ಟೋಫಾನ್ ಎನ್ನುವ ಒಂದು ರೀತಿಯ ಪ್ರೊಟೀನ್ ಇರುತ್ತದೆ. ಮನುಷ್ಯ ಬಾಳೆಹಣ್ಣು ಸೇವಿಸಿದಾಗ ಅದು ಸಿರೊಟೋನಿಸ್ ಆಗಿ ಪರಿವರ್ತನೆ ಆಗುತ್ತದೆ. ಇದರಿಂದ ದೇಹ ಆರಾಮದಾಯಕ ಮತ್ತು ಉಲ್ಲಾಸ ಭರಿತ ಮನಸ್ಥಿತಿ ಆಗಿ ಸುಧಾರಿಸುತ್ತದೆ.

ಬಾಳೆಹಣ್ಣಿನಲ್ಲಿರೋ ಪ್ರಮುಖ 3 ಅಂಶಗಳು:
ಇದಿಷ್ಟೇ ಅಲ್ಲ, ಬಾಳೆಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ 3 ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಫೈಬರ್​ಗಳಿವೆ. ಹೀಗಾಗಿ ಊಟ ಮಾಡಿದ ತಕ್ಷಣ ಕೆಲವರು ಬಾಳೆಹಣ್ಣು ತಿನ್ನುತ್ತಾರೆ. ಇದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ದಿನಕ್ಕೆ 2 ಬಾಳೆಹಣ್ಣು ತಿಂದರೆ ಒಂದೂವರೆ ಗಂಟೆ ಯಾವುದೇ ಕೆಲಸವನ್ನು ನಿರಾಳವಾಗಿ ಮಾಡಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಯಾರೇ ಯಾವುದೇ ಹಣ್ಣು ತಿನ್ನಲಿ ಕ್ರೀಡಾಪಟುಗಳು ಮಾತ್ರ ಬಾಳೆಹಣ್ಣುಗಳನ್ನು ತಿನ್ನಲೇಬೇಕು. ಏಕೆಂದರೆ ಇದರಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಅಂಶಗಳು ಇರುವುದರಿಂದ ನಿಮಗೆ ಅತೀ ಬೇಗ ಪುಷ್ಠಿ ಹಾಗೂ ಚೈತನ್ಯವನ್ನು ನೀಡಿ ಕ್ರಿಡೇಯಲ್ಲಿ ಗೆಲುವು ಸಾಧಿಸಲು ಸಹಾಯಕವಾಗುತ್ತದೆ. ವೈದ್ಯರು ಕೂಡ ಊಟದ ಬಳಿಕ ಈ ಹಣ್ಣುಗಳನ್ನು ಸೇವನೆ ಮಾಡುವುದು ಉತ್ತಮ ಎಂದು ರೋಗಿಗಳಿಗೆ ಸಲಹೆ ನೀಡುತ್ತಾರೆ.

ಬಾಳೆಹಣ್ಣಿನಿಂದ ದೇಹಕ್ಕಾಗೋ ಪ್ರಯೋಜನ ಏನು?ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ನೀವು ಉತ್ತಮ ಆರೋಗ್ಯ ಫಲಿತಾಂಶಗಳನ್ನು ಕಾಣಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್-ಎ, ಬಿ, ಸಿ ಮತ್ತು ವಿಟಮಿನ್ ಬಿ6 ಇದೆ. ನೀವು ಅಧಿಕ ತೂಕ ಹೊಂದಿದ್ದರೆ, ಬಾಳೆಹಣ್ಣುಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಮಕ್ಕಳಿಗೆ ದಿನ ಬಾಳೆ ತಿನ್ನಿಸುವುದರಿಂದ ಆಸ್ತಮಾ ಕಾಯಿಲೆ ದೂರ ಮಾಡಬಹುದು. ದೇಹದೊಳಗಿನ ಕರುಳನ್ನು ಆರೋಗ್ಯವಾಗಿಸಿ ನರಮಂಡಲವನ್ನು ಬಲಪಡಿಸುತ್ತದೆ. ಬಿಳಿ ರಕ್ತ ಕಣಗಳಿಗೆ ಹಸಿರು ಹಣ್ಣುಗಳಿಗಿಂತ ಕಪ್ಪು ಬಾಳೆ 7 ಪಟ್ಟು ಹೆಚ್ಚು ಪರಿಣಾಮಕಾರಿ ಆಗಿದೆ. ಬಾಳೆಹಣ್ಣು ತಿನ್ನೋದರಿಂದ ಹೃದಯ ಉತ್ತಮವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ಹಣ್ಣುಗಳಿಗಿಂತ ಬಾಳೆ ದೇಹದಲ್ಲಿ ಜೀರ್ಣಕ್ರಿಯೆಯನ್ನು ಬಲಪಡಿಸುವ ಕೆಲಸ ಮಾಡುತ್ತದೆ. ವಿಟಮಿನ್ ಬಿ-6, ಮೆಗ್ನೀಷಿಯಂ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ರೆಗೆ ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಪಿಹಚ್​ ಮಟ್ಟ ಸರಿದೂಗಿಸಿ ನೋವನ್ನು ಬಾಳೆಹಣ್ಣು ಕಡಿಮೆಗೊಳಿಸುತ್ತದೆ. ಕಡಿಮೆ ಪ್ರಮಾಣದಲ್ಲಿ ಉಪ್ಪಿನಿಂದ ಮತ್ತು ಅಧಿಕವಾಗಿ ಪೊಟಾಷಿಯಂ ಇದೆ. ಇದು ರಕ್ತದೊತ್ತಡ ಪರಿಪೂರ್ಣ ವಾಗಿಸುತ್ತದೆ.