

ಡೈಲಿ ವಾರ್ತೆ: 25/ಫೆ. /2025


ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಉಪನ್ಯಾಸಕರಿಗೆ “ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ” ಕಾರ್ಯಕ್ರಮ

ಬ್ರಹ್ಮಾವರ| ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಎಲ್ಲಾ ಉಪನ್ಯಾಸಕರಿಗೆ “ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ” ಎಂಬ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಶ್ರೀ ಮಾಧವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಬಂಟಕಲ್ಲು ಉಡುಪಿ ಇದರ ಪ್ರೊಫೆಸರ್ ಸ್ಟೀವನ್ ರಾಬರ್ಟ್ ಟೆಲ್ಲಿಸ್ ಇವರು ಎಲ್ಲಾ ಉಪನ್ಯಾಸಕರಿಗೆ “ತರಬೇತಿದಾರರಿಗೆ ತರಬೇತಿ” ಎನ್ನುವ ವಿಷಯದ ಕುರಿತು ಅನೇಕ ಮಾಹಿತಿಗಳಾದ ತರಗತಿ ನಿರ್ವಹಣೆ, ವಿದ್ಯಾರ್ಥಿಗಳೊಂದಿಗೆ ಸಂವಹನ, ಪ್ರಚಲಿತ ವಿಷಯ, ಅನೇಕ ಚಟುವಟಿಕೆಗಳನ್ನು ನಡೆಸಿ ಸೂಕ್ತ ಮಾಹಿತಿ ನೀಡಿದರು.
ಕಾಲೇಜಿನ ಸಂಸ್ಥಾಪಕರಾದ ಸುಬ್ರಮಣ್ಯ,ಹಾಗೂ ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ, ಪ್ರಾಂಶುಪಾಲರಾದ ಡಾ. ಸೀಮಾ ಜಿ ಭಟ್ ಹಾಗೂ
ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಕುಮಾರಿ ಸ್ವಾತಿ ನಿರೂಪಿಸಿದರೆ, ಉಪನ್ಯಾಸಕಿ ಕುಮಾರಿ ಸೋಫಿಯಾ, ಸ್ವಾಗತಿಸಿ , ಉಪನ್ಯಾಸಕ ಬೆನಕ ಅತಿಥಿಗಳನ್ನು ಪರಿಚಯಿಸಿ, ಉಪನ್ಯಾಸಕಿ ಶ್ರೀಮತಿ ಪ್ರಿಯಾ ವಂದಿಸಿದರು.