ಡೈಲಿ ವಾರ್ತೆ: 25/ಫೆ. /2025

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ರಾಗಿ ಕರಾವಳಿ ಮೂಲದ ಡಾ.ನಿಕಿನ್ ಶೆಟ್ಟಿ ಆಯ್ಕೆ

ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 54 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿ ಕರ್ನಾಟಕ ಮೂಲದ ಸಮರ್ಥ ನಾಯಕರೊಬ್ಬರು ಪ್ರಚಂಡ ಬಹುಮತದಿಂದ 2027-29 ರ ಸಾಲಿಗೆ ರಾಜ್ಯಾಧ್ಯಕ್ಷರಾಗಿ ಡಾ. ನಿಕಿನ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.ಡಾ. ನಿಕಿನ್ ಶೇಟ್ಯಿ ಅವರಿಗೆ ಉಡುಪಿ ಜಿಲ್ಲಾ KGMOA ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘ ಕುಂದಾಪುರದ ಅಧ್ಯಕ್ಷ ಡಾ. ನಾಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ಇದು ಉಡುಪಿ ಜಿಲ್ಲಾ KGMOA ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಒಂದು ಸಾಧನೆ. ಕೇವಲ 20 ದಿನಗಳಲ್ಲಿ 27 ಜಿಲ್ಲೆಗಳ್ಳಿಗೆ ಪ್ರವಾಸ ಮಾಡಿ, ಸಂಘದ ಸದಸ್ಯರ ಒಲವು ಮತ್ತು ನಂಬಿಕೆಯನ್ನು ಗಳಿಸುವ ನಿಟ್ಟಿನಲ್ಲಿ ಅವರು ಪಟ್ಟಿರುವ ಶ್ರಮ ಶ್ಲಾಘನೀಯ.ಅವರೊಂದಿಗೆ ಕೈ ಜೋಡಿಸಿದ ಕೋರ್ ಸಮಿತಿಯ ಸರ್ವ ಸದಸ್ಯರು ಅಭಿನಂದನಾರ್ಹರು. ಈ ಗೆಲುವಿನ ಗುರಿ ಸಾಧಿಸುವಲ್ಲಿ ಶ್ರಮಿಸಿದ ಉಡುಪಿ ಜಿಲ್ಲಾ KGMOA ಸರ್ವ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ ಅವರು, ಈ ವಿಜಯವು ಉಡುಪಿ ಜಿಲ್ಲಾ ಸಂಘದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಡಾ. ನಿಕಿನ್ ಶೆಟ್ಟಿಯವರ ಸಂಘವನ್ನು ಬಲಗೊಳಿಸುವ ಹೋರಾಟದಲ್ಲಿ ನಾವೆಲ್ಲರು ಅವರ ಜೊತೆ ಕೈಜೋಡಿಸೋಣ ಎಂದು ಡಾ. ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ರಾಗಿ ನೂತನವಾಗಿ ಆಯ್ಕೆಯಾಗಿರುವ ಡಾ.ನಿಕಿನ್ ಶೆಟ್ಟಿ ಅವರಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.