


ಡೈಲಿ ವಾರ್ತೆ: 26/ಫೆ. /2025


ಉದ್ಯಾವರ| ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ಪ್ರಕರಣ – ಇಬ್ಬರ ಬಂಧನ
ಉಡುಪಿ: ಉದ್ಯಾವರ ಕೆನರಾ ಬ್ಯಾಂಕ್‌ನ ಎಟಿಎಂ ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಗಳಿಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಮಂಜನಾಡಿಯ ಅಬೂಬಕ್ಕರ್ ಸಿದ್ದಿಕ್ (24) ಮತ್ತು ಪಡೀಲ್‌ನ ಮೊಹಮ್ಮದ್ ಯಾಸೀನ್(21) ಬಂಧಿತ ಆರೋಪಿಗಳು.
ಆರೋಪಿಗಳಿಬ್ಬರು ಫೆ.12 ರಂದು ಉದ್ಯಾವರದಲ್ಲಿ ಬ್ಯಾಂಕಿನ ಎಟಿಎಮ್ ನ ಹಣ ದೋಚಲು ವಿಫಲ ಯತ್ನ ನಡೆಸಿದ್ದರು. ಆರೋಪಿಗಳ ಚಲನವಲನದ ಸಿಸಿಟಿವಿಯ ದೃಶ್ಯ ಆಧರಿಸಿ ಕಾಪು ಪೊಲೀಸರು ಇಬ್ಬರನ್ನು ಮಂಗಳೂರಿನ ಬಂದರಿನಲ್ಲಿ ಬಂಧಿಸಿದ್ದಾರೆ.
ಈ ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ಕಾಪು ವೃತ್ತ ನಿರೀಕ್ಷಕಿಯಾದ ಜಯಶ್ರೀ ಎಸ್ ಮಾನೆ, ಪಡುಬಿದ್ರಿ ಠಾಣೆಯ ಪಿಎಸ್‌ಐ ರವರಾದ ಅನಿಲ್ ಕುಮಾರ್ ಟಿ ನಾಯ್ಕ, ಕಾಪು ಠಾಣೆಯ ಪಿಎಸ್‌ಐ ರಮೇಶ್ ನಾಯ್ಕ, ಹಾಗೂ ಕಾಪು ಠಾಣೆಯ ಸಿಬ್ಬಂದಿಯವರಾದ ಮೋಹನಚಂದ್ರ, ಬಸವರಾಜ, ಗುರುಪಾದಯ್ಯ, ಪ್ರಸಾದ್, ಪಡುಬಿದ್ರಿ ಠಾಣೆಯ ಎ ಎಸ್ ಐ ರಾಜೇಶ್, ಸಿಬ್ಬಂದಿಯವರಾದ ಸಂದೇಶ, ಶಿರ್ವ ಠಾಣೆ ಸಿಬ್ಬಂದಿಯರಾದ ಸಿದ್ದರಾಯ, ಜೀವನ್ ರವರ ತಂಡ ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ KA-19-HQ-7717 ನಂಬ್ರದ ಸ್ಕೂಟಿ, ಜಾಕೆಟ್-1, ಹೆಲೈಟ್-1, ಕ್ಯಾಪ್-1, ಹ್ಯಾಂಡ್ ಗ್ಲಸ್-1ಜೊತೆ, ಕತ್ತಿ-1, ಹ್ಯಾಮರ್- 1 ಹಾಗೂ ಬ್ಯಾಗ್ -1 ನ್ನು ವಶಪಡಿಸಿಕೊಳ್ಳಲಾಗಿದೆ.