ಡೈಲಿ ವಾರ್ತೆ: 26/ಫೆ. /2025

ಮಲ್ಲಾರ್| ಕುರಾನ್ ಕಂಠಪಾಠ ಮಾಡಿದ ಬಾಲಕ ಹಾಫಿಝ್ ಮುಹಮ್ಮದ್ ಝೈನ್ ರವರಿಗೆ ಸಮ್ಮಾನ

ಕಾಪು| ಮದ್ರಸಾ ತಾಲೀಮುಲ್ ಕುರಾನ್ ಸಮಿತಿ ಮತ್ತು ಸುನ್ನೀ ಹನಫಿ ಜಾಮಿಯಾ ಮಸ್ಜಿದ್ ಕಮಿಟಿ ಅಹ್ಮದಿ ಮೊಹಲ್ಲಾ ಮಲ್ಲಾರ್ ಕಾಪು ಇದರ ವತಿಯಿಂದ ದಸ್ತಾರೆ ಹಿಫ್ಝುಲ್ ಕುರಾನ್ ಮತ್ತು ಹದಿಯಾ ಎ ನಾಝಿರಾ ಅಲ್ ಕುರಾನ್ ಕಾರ್ಯಕ್ರಮವು ಫೆಬ್ರವರಿ 23 ರವಿವಾರದಂದು ಜರುಗಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ 3 ವರ್ಷಗಳ ಸತತ ಪ್ರಯತ್ನದಿಂದ ಕುರಾನ್ ಅನ್ನು ಸಂಪೂರ್ಣ ಕಂಠಪಾಠ ಮಾಡಿದ 13 ವರ್ಷ ಪ್ರಾಯದ ಮುಹಮ್ಮದ್ ಝೈನ್ ರವರನ್ನು ಹಫ್ಫಾಝ್ ದಸ್ತರ್ ಬಂದಿ ನಡೆಸಿದರು. ನಂತರ ಹಾಫಿಝ್ ಬಿರುದು ನೀಡಿ , ಹೂ ಮಾಲೆ ಹಾಕಿ ಗೌರವಯುತವಾಗಿ ಸಮ್ಮಾನಿಸಲಾಯಿತು.

ಕಾರವಾರ ಅಂಕೋಲಾದ ಚೀಫ್ ಖಾಝಿ ಹಝ್ರತ್ ಮೌಲಾನ ಇಶ್ತಿಯಾಕ್ ರವರು ಮುಖ್ಯ ಪ್ರಭಾಷಣವನ್ನು ಮಾಡಿ , ಇಂದು ಹಾಫಿಝ್ ಮುಹಮ್ಮದ್ ಝೈನ್ ರವರನ್ನು ಕುರಾನ್ ಕಂಠಪಾಠ ಮಾಡಿಸಿ (ಹಾಫಿಝ್) ಸಮಾಜಕ್ಕೆ ಅರ್ಪಿಸಿದ ಹಾಗೂ ಹಲವು ಶಿಷ್ಯಂದಿರನ್ನು ಹಾಫಿಝ್ ಮಾಡಿ ಸಮಾಜಕ್ಕೆ ಅರ್ಪಿಸಲು ಸಜ್ಜಾಗಿರುವ , ಗುರುವರ್ಯರಾದ ಹಾಫಿಝ್ ಒ ಖಾರಿ ಮೌಲಾನಾ ಲುಕ್ಮಾನ್ ರಝಾ ಮಿಸ್ಬಾಹಿರವರ ಕಾರ್ಯವನ್ನು ಕೊಂಡಾಡಿದರು. ಸುಧೀರ್ಘ 18 ವರ್ಷಗಳ ಧಾರ್ಮಿಕ ಸೇವೆಯನ್ನು ಗುರುತಿಸಿ ಉಲಮಾ ಎ ಅಹ್ಲೆ ಸುನ್ನತ್ ಉಡುಪಿ ಇವರು ಹಾಫಿಝೆ ಮಿಲ್ಲತ್ ಪ್ರಶಸ್ತಿಯನ್ನುನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮದ್ರಸಾ ತಾಲೀಮುಲ್ ಕುರಾನ್ ಸಂಸ್ಥೆಯ ಜವಾಬ್ದಾರಿಯುತರು ಹಾಗೂ ಗುರುವರ್ಯರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಜನಾಬ್ ಝಾಕಿರ್ , ಉಪಾಧ್ಯಕ್ಷರಾದ ಝಲ್ಫಿಕರ್, ಖಜಾಂಚಿ ಜನಾಬ್ ಇಂಜಿನಿಯರ್ ಸುಲೈಮಾನ್ ಮಲ್ಲಾರು ಆಸುಪಾಸಿನ ಮಸೀದಿಗಳ ಉಲಮಾಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಜನಾಬ್ ನೂರುದ್ದೀನ್ ರವರು ನೆರವೇರಿಸಿದರು.