

ಡೈಲಿ ವಾರ್ತೆ: 02/ಮಾರ್ಚ್ /2025


ಬೂದು ಕುಂಬಳಕಾಯಿ ರಸವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು

ತರಕಾರಿಗಳಲ್ಲಿ ಹಲವು ವಿಧ. ಅದರಲ್ಲಿ ಬೂದು ಕುಂಬಳಕಾಯಿಯೂ ಒಂದು. ಇದು ಕೇವಲ ತರಕಾರಿ ಮಾತ್ರವಲ್ಲ ಸರ್ವರೋಗಕ್ಕೂ ಪರಿಹಾರ ನೀಡುವ ಔಷಧ. ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಬೂದಿ ಕುಂಬಳಕಾಯಿ ಅನೇಕ ಔಷಧೀಯ ಗುಣಗಳಿಂದ ತುಂಬಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದ್ದು ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಜೊತೆಗೆ ಬೂದು ಕುಂಬಳಕಾಯಿ ರಸವು ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಖನಿಜಗಳನ್ನು ಹೊಂದಿದೆ ಹಾಗೂ ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್‌ನಂತಹ ವಿಟಮಿನ್‌ಗಳ ಮೂಲವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದರ ರಸ ಸೇವನೆ ಮಾಡುವುದು ಸೂಕ್ತ ಎಂದು ಹೇಳಲಾಗುತ್ತದೆ. ನೀವು ದಿನನಿತ್ಯ ಇದರ ಜ್ಯೂಸ್ ಸೇವನೆ ಮಾಡುತ್ತಿದ್ದರೆ ಈ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೂದಿ ಕುಂಬಳಕಾಯಿ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ರೋಗಗಳಿಂದ ದೂರವಿರಬಹುದು. ಜೊತೆಗೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಅದಲ್ಲದೆ ಪ್ರತಿದಿನ ಈ ರಸವನ್ನು ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗುವುದಿಲ್ಲ.
ಕುಂಬಳಕಾಯಿ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಕುಂಬಳಕಾಯಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಇದರಲ್ಲಿರುವ ನಾರಿನಂಶ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಬೂದು ಕುಂಬಳಕಾಯಿ ರಸವು ಉತ್ತಮ ಆಯ್ಕೆಯಾಗಿದೆ. ನೀವು ಈ ರಸವನ್ನು ನಿಯಮಿತವಾಗಿ ತೆಗೆದುಕೊಂಡರೆ, ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕುಂಬಳಕಾಯಿ ರಸವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ವಾತ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸುತ್ತದೆ. ಈ ತರಕಾರಿಯಲ್ಲಿ ಫೈಬರ್ ಅಧಿಕವಾಗಿರುವುದರಿಂದ, ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಬೂದು ಕುಂಬಳಕಾಯಿ ರಸವನ್ನು ಕುಡಿಯುವುದರಿಂದ ಮೂತ್ರಪಿಂಡದ ಆರೋಗ್ಯ ಹೆಚ್ಚಾಗಿ, ಸಮಸ್ಯೆ ದೂರವಾಗುತ್ತದೆ. ಮೂತ್ರಪಿಂಡದಲ್ಲಿನ ಕಲ್ಲುಗಳ ಸಮಸ್ಯೆ ಕಡಿಮೆಯಾಗುತ್ತವೆ.
ಮೂತ್ರದ ಸಮಸ್ಯೆಗಳಿಂದ ದೂರವಿರಲು ಈ ರಸವು ತುಂಬಾ ಉಪಯುಕ್ತವಾಗಿದೆ. ಈ ರಸವನ್ನು ಕುಡಿಯುವುದರಿಂದ ಯುಟಿಐ ಕಡಿಮೆಯಾಗುತ್ತದೆ. ಈ ರಸವನ್ನು ಸೇವಿಸುವುದರಿಂದ ಉತ್ತಮ ಶಕ್ತಿ ಸಿಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸತು ಸಮೃದ್ಧವಾಗಿದೆ. ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್ ಸಹ ಇವೆ.
ಈ ತರಕಾರಿಯ ರಸವನ್ನು ನಿಯಮಿತವಾಗಿ ಸೇವನೆ ಮಾಡಿದರೆ ದೇಹದಲ್ಲಿನ ಕಲ್ಮಶಗಳು ಹೊರಹೋಗುತ್ತವೆ. ಸೈನಸ್ ಸಮಸ್ಯೆ ಇದ್ದರೂ ಸಹ ನಿವಾರಣೆಯಾಗಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.