

ಡೈಲಿ ವಾರ್ತೆ: 01/ಮಾರ್ಚ್ /2025


ಲಯನ್ಸ್ ರೀಜನ್ ಮೀಟ್ : “ಅದ್ವಿತಾ- 2025”: ನಗರ ಪ್ರದೇಶಗಳಲ್ಲಿ ಇದ್ದ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಇಂದು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ – ನ್ಯಾಯಾಧೀಶೆ ಶ್ರೀಮತಿ ಅಂಪಾರು ಅರುಣಾ ಸೋಮನಾಥ ಹೆಗ್ಡೆ

ಲಯನ್ಸ್ ಇಂಟರ್‌ನ್ಯಾಷನಲ್, ಜಿಲ್ಲೆ-317ಸಿ, ಪ್ರಾಂತ್ಯ 5 ರ ಲಯನ್ಸ್ ರೀಜನ್ ಮೀಟ್ “ಅದ್ವಿತಾ-2025” ಕಾರ್ಯಕ್ರಮ ಬನ್ನಾಡಿ ಗ್ರಾಮದ, ಉಪ್ಲಾಡಿ ಹೊರ್‌ಮಕ್ಲು ಜಡ್ಡಿನ ತೆರೆದ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿತು.

ಜಿಲ್ಲೆ-317ಸಿ, ಪ್ರಾಂತ್ಯ 5 ರ ಪ್ರಾಂತ್ಯಾಧ್ಯಕ್ಷ ಲಯನ್ Adv ಬನ್ನಾಡಿ ಸೋಮನಾಥ ಹೆಗ್ಡೆ ಯವರ ಪುತ್ರಿ ಕು. ಅದ್ವಿತಾ ಹಾಗೂ ಚನ್ನರಾಯಪಟ್ಟಣ ನ್ಯಾಯಾಲಯದ ಗೌರವಾನ್ವಿತ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶೆ ಹಾಗೂ ಜಿಲ್ಲೆ-317ಸಿ, ಪ್ರಾಂತ್ಯ 5 ರ ಪ್ರಥಮ ಮಹಿಳೆ ಶ್ರೀಮತಿ ಅಂಪಾರು ಅರುಣಾ ಸೋಮನಾಥ ಹೆಗ್ಡೆ ಯವರು ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

“ನಗರ ಪ್ರದೇಶಗಳಲ್ಲಿ ಇದ್ದ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಇಂದು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ನಿಜವಾಗಿಯೂ ಮೆಚ್ಚಲೆಬೇಕಾದ ವಿಚಾರ, ಅಗತ್ಯತೆ ಇದ್ದವರಿಗೆ ಸೇವೆಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿಯೂ ದೊರೆಯುತ್ತದೆ ಹಾಗೂ ನಾವು ಈ ಸಮಾಜಕ್ಕೆ ಏನನ್ನಾದರೂ ನೀಡಿದ್ದೇವೆ ಎನ್ನುವ ಆತ್ಮತೃಪ್ತಿ ಕೂಡ ಇರುತ್ತದೆ” ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಚನ್ನರಾಯಪಟ್ಟಣ ನ್ಯಾಯಾಲಯದ ಗೌರವಾನ್ವಿತ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶೆ ಹಾಗೂ ಜಿಲ್ಲೆ-317ಸಿ, ಪ್ರಾಂತ್ಯ ಗಿ ರ ಪ್ರಥಮ ಮಹಿಳೆ ಶ್ರೀಮತಿ ಅಂಪಾರು ಅರುಣಾ ಸೋಮನಾಥ ಹೆಗ್ಡೆ ಯವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲೆ-317ಸಿ, ಪ್ರಾಂತ್ಯ 5 ರ ಪ್ರಾಂತ್ಯಾಧ್ಯಕ್ಷ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ “ಮನುಷ್ಯನಿಗೆ ಕನಸುಗಳು ಇರಬೇಕು, ಕನಸುಗಳು ಇದ್ದಲ್ಲಿ ಮಾತ್ರ, ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಸ್ಥಾಪಕರಾದ ಮೆಲ್ವಿನ್ ಜೋನ್ಸ್ ರವರು ಹೇಳಿದ ಹಾಗೆ, ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಲಯನ್ಸ್ ಸೇವಾ ಸದಸ್ಯರು ಸೇವಾ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾಜದ ದುರ್ಬಲರ, ಅಶಕ್ತರ ಕಣ್ಣೀರು ಒರೆಸುವ ಕೆಲಸವನ್ನು ಮಾಡಬೇಕಾಗಿದೆ.” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಹೊಸನಗರ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಕೆ ಶ್ರೀಪತಿ ಹಳಗುಂದ ಇವರು ತಮ್ಮ ದಿಕ್ಸೂಚಿ ಭಾಷಣದಲ್ಲಿ “ಈ ಪವಿತ್ರ ಭಾರತದಲ್ಲಿ ಹಿಂದೂಗಳಿದ್ದಾರೆ, ಮುಸ್ಲಿಂರಿದ್ದಾರೆ, ಕ್ರೈಸ್ತರಿದ್ದಾರೆ, ಸಿಖ್ಖರಿದ್ದಾರೆ, ಜೈನರಿದ್ದಾರೆ, ಬೌದ್ಧರಿದ್ದಾರೆ ಆದರೆ ನಾನು ಹುಡುಕುತ್ತಿರುವುದು ಮನುಷ್ಯರನ್ನು, ದಯಮಾಡಿ ಹೇಳಿ ಅವರು ಎಲ್ಲಿದ್ದಾರೆ ಎಂದು”, “ದೇಶದ ಉದ್ಧಗಲಕ್ಕೆ ಗುಡಿ, ಚರ್ಚು, ಮಸೀದಿ, ಮಠಗಳು ಇದ್ದಾವೆ ಆದರೆ ನಾನು ಹುಡುಕುತ್ತಿರುವುದು ಅದರೊಳಗಿನ ದೇವರನ್ನು ದಯಮಾಡಿ ಹೇಳಿ ಆತ ಎಲ್ಲಿದ್ದಾನೆ ಎಂದು”, “ಈ ದೇಶದ ಹಿಂದೂಗಳಿಗೆ ಭಗವದ್ಗೀತೆ ಇದೆ, ಈ ದೇಶದ ಕ್ರೈಸ್ತರಿಗೆ ಬೈಬಲ್ ಇದೆ, ಈ ದೇಶದ ಮುಸಲ್ಮಾನರಿಗೆ ಕುರಾನ್ ಇದೆ, ನಾನು ಹುಡುಕುತ್ತಿರುವುದು ಪ್ರೀತಿಯನ್ನು, ದಯಮಾಡಿ ಹೇಳಿ ಅದು ಎಲ್ಲಿದೆ ಎಂದು”, “ಈ ಮೂರು ಕಾರ್ಯಗಳನ್ನು ಪ್ರಶ್ನಾರ್ಥಕವಾಗಿ ಇಟ್ಟುಕೊಂಡು ಹುಡುಕುತ್ತಾ ಹೋದರೆ ಜಗತ್ತಿನ ಎಲ್ಲವೂ ಸಿಗುತ್ತದೆ” ಎಂದು ಹೇಳಿದರು.


ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್, ದ್ವೀತಿಯ ಉಪ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಪಿ.ಡಿ.ಜಿ ಲಯನ್ ಜಯಕರ್ ಶೆಟ್ಟಿ ಕುಂದಾಪುರ, ಎಲ್.ಸಿ.ಐ.ಎಫ್ ಕೋ-ಆರ್ಡಿನೇಟರ್ ಲಯನ್ ಹರಿಪ್ರಸಾದ್ ರೈ, ರೀಜನ್ ಸೆಕ್ರೆಟರಿ ಲಯನ್ ಕಬ್ಬೈಲ್ ಆನಂದ ಶೆಟ್ಟಿ ಹಾಗೂ ಹೋಸ್ಟ್ ಕ್ಲಬ್ ಆದ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ ಹಾಗೂ ಜಿಲ್ಲೆಯ ಇತರ ರೀಜನ್ ಗಳ ರೀಜನ್ ಚೇಯರ್ ಪರ್ಸನ್‌ಗಳಾದ ಲಯನ್ ವಿ.ಎಸ್. ಉಮ್ಮರ್, ಲಯನ್ ವರುಣ್ ಕೆ ಶೆಟ್ಟಿ, ಲಯನ್ ಮೆಲ್ವಿನ್ ಎಮ್ ಅರನ್ಹಾ, ಲಯನ್ ಬೇಳಂಜೆ ಹರೀಶ್ ಪೂಜಾರಿ, ಲಯನ್ ಜಗದೀಶ್ ಶೆಟ್ಟಿ ಉಪ್ಪುಂದ. ಲಯನ್ ಬಿ.ಎಸ್. ಮಹೇಶ್ ಕುಮಾರ್, ಲಯನ್ ಎಸ್.ಜೆ ಸತೀಶ್, ಲಯನ್ ವೈ.ಬಿ ಸತೀಶ್, ಲಯನ್ ಹೆಚ್. ಬಾಲಕೃಷ್ಣ ಶೆಟ್ಟಿ ಹಂಗಳೂರು, ಲಯನ್ ವಸಂತ ಶೆಟ್ಟಿ ಬೆಳ್ವೆ ಹಾಗೂ ಹೋಸ್ಟ್ ಕ್ಲಬ್ ಆದ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಕಾರ್ಯದರ್ಶಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ಮಾಜಿ ಲಯನ್ಸ್ ಜಿಲ್ಲಾ ಗವರ್ನರ್‌ಗಳಾದ ಲಯನ್ ಎನ್.ಎಮ್.ಹೆಗ್ಡೆ, ಲಯನ್ ವಿಶ್ವನಾಥ ಶೆಟ್ಟಿ, ಲಯನ್ ನೇರಿ ಕರ್ನೇಲಿಯೊ, ಲಯನ್ ಬಸ್ರೂರು ರಾಜೀವ್ ಶೆಟ್ಟಿ ಮತ್ತು ಲಯನ್ ವಿ.ಜಿ ಶೆಟ್ಟಿ ಯವರು ಉಪಸ್ಥಿತರಿದ್ದರು.

ರೀಜನ್ ಮೀಟ್ ಕಾರ್ಯಕ್ರಮದ ಅಂಗವಾಗಿ ಬನ್ನಾಡಿ ಗ್ರಾಮದ ಉಪ್ಲಾಡಿಯ ಸೇತುವೆ ಬಳಿ ನೂತನವಾಗಿ ನಿರ್ಮಿಸಿದ “ಲಯನ್ಸ್ ಬಸ್ಸು ತಂಗುದಾಣ” ಸೇರಿ, ಸುಮಾರು ರೂಪಾಯಿ ಎರಡು ಲಕ್ಷಕ್ಕೂ ಅಧಿಕ ಇತರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಕುಮಾರಿ ರಚನಾ ಸ್ವಾಗತ ನೃತ್ಯವನ್ನು ಮಾಡಿದರು, ಬ್ರಹ್ಮಾವರ ಲಯನ್ಸ್ ಕ್ಲಬ್‌ನ ಲಯನ್ ಕಲ್ಪನಾ ಸಂತೋಷ್ ಶೆಟ್ಟಿ ಪ್ರಾರ್ಥಿಸಿದರು, ಲಯನ್ ಪ್ರೋಫೆಸರ್ ಜಿ. ಬಾಲಕೃಷ್ಣ ಶೆಟ್ಟಿ ರಾಷ್ಟ್ರ ಧ್ವಜವನ್ನು ವೇದಿಕೆಗೆ ತಂದರು, ರೀಜನ್ ಮೀಟ್ ಕಾರ್ಯಕ್ರಮದ ಕೋಶಾಧಿಕಾರಿ ಕೋಟೇಶ್ವರ ಲಯನ್ಸ್ ಕ್ಲಬ್‌ನ ಲಯನ್ ಏಕನಾಥ್ ಬೋಳಾರ್ ಧ್ವಜವಂದನೆ ಮಾಡಿದರು, ರೀಜನ್ ಮೀಟ್ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಕರಾದ ಮೊಳಹಳ್ಳಿ ಶಿವಶಾಂತಿ ಲಯನ್ಸ್ ಕ್ಲಬ್‌ನ ಲಯನ್ ದೀನ್‌ಪಾಲ್ ಶೆಟ್ಟಿ ಲಯನ್ ಕೋಡ್ ಆಫ್ ಎಥಿಕ್ಸ್ ವಾಚಿಸಿದರು, ರೀಜನ್ ಮೀಟ್ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಕರಾದ ಕೋಟೇಶ್ವರ ಲಯನ್ಸ್ ಕ್ಲಬ್‌ನ ಲಯನ್ ದಿನಕರ್ ಶೆಟ್ಟಿ ಎಮ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ರೀಜನ್ ಮೀಟ್ ಕಮಿಟಿಯ ರಿಜಿಸ್ಟ್ರೇಷನ್ ಕಮಿಟಿಯ ಅಧ್ಯಕ್ಷರಾದ ಲಯನ್ ಪ್ರೋಫೆಸರ್ ಕಲ್‌ಕಟ್ಟೆ ಚಂದ್ರಶೇಖರ್ ಶೆಟ್ಟಿ ರಿಜಿಸ್ಟ್ರೇಷನ್ ವಿವರಗಳನ್ನು ನೀಡಿದರು, ವಲಯಾಧ್ಯಕ್ಷರಾದ ತೆಕ್ಕಟ್ಟೆ ಲಯನ್ಸ್ ಕ್ಲಬ್‌ನ ಧರ್ಮರಾಜ್ ಮುದಲಿಯಾರ್ ರೆಸಲೂಶನ್ ಆಫ್ ಅಪ್ರಿಸಿಯೇಶನ್ ಟೂ ರೀಜನ್ ಚೇಯರ್ ಪರ್ಸನ್, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಮಾಜಿ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಕೊಮೆ ಇವರು ರೆಸಲೂಶನ್ ಆಫ್ ಅಪ್ರಿಸಿಯೇಶನ್ ಟೂ ರೀಜನ್ ಮೀಟ್ ಕಮಿಟಿ, ಕುಂದಾಪುರ ಅಮೃತಧಾರ ಲಯನ್ಸ್ ಕ್ಲಬ್‌ನ ಲಯನ್ ಸರಸ್ವತಿ ಪುತ್ರನ್ ಇವರು ರೆಸಲೂಶನ್ ಆಫ್ ಅಪ್ರಿಸಿಯೇಶನ್ ಟೂ ಹೋಸ್ಟ್ ಕ್ಲಬ್‌ನ್ನು ವಾಚಿಸಿದರು.


ಸಭಾ ಕಾರ್ಯಕ್ರಮಕ್ಕೂ ಮುನ್ನ ರೀಜನ್‌ನ 12 ಕ್ಲಬ್‌ಗಳಾದ ಲಯನ್ಸ್ ಕ್ಲಬ್ ಆರ್ಡಿ-ಬೆಳ್ವೆ-ಗೋಳಿಯಂಗಡಿ, ಲಯನ್ಸ್ ಕ್ಲಬ್ ಹಾಲಾಡಿ-ಬಿದ್ಕಲ್‌ಕಟ್ಟೆ, ಲಯನ್ಸ್ ಕ್ಲಬ್ ಮೊಳಹಳ್ಳಿ-ಶಿವಶಾಂತಿ, ಲಯನ್ಸ್ ಕ್ಲಬ್ ಹಂಗಳೂರು, ಲಯನ್ಸ್ ಕ್ಲಬ್ ಕೋಟೇಶ್ವರ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್, ಲಯನ್ಸ್ ಕ್ಲಬ್ ತೆಕ್ಕಟ್ಟೆ, ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು, ಲಯನ್ಸ್ ಕ್ಲಬ್ ಕೋಟ-ಗಿಳಿಯಾರು ಮತ್ತು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸದಸ್ಯರು ಆಕರ್ಷಕವಾದ “ಬ್ಯಾನರ್ ಪ್ರೆಸೆಂಟೇಶನ್” ಪ್ರದರ್ಶಿಸಿದರು.

ಬ್ಯಾನರ್ ಪ್ರೆಸೆಂಟೇಶನ್‌ನ ಪ್ರಥಮ ಬಹುಮಾನವನ್ನು ಲಯನ್ಸ್ ಕ್ಲಬ್ ಹಂಗಳೂರು, ದ್ವಿತೀಯ ಬಹುಮಾನವನ್ನು ಲಯನ್ಸ್ ಕ್ಲಬ್ ತೆಕ್ಕಟ್ಟೆ ಹಾಗೂ ತೃತೀಯ ಬಹುಮಾನವನ್ನು ಲಯನ್ಸ್ ಕ್ಲಬ್ ಕೋಟೇಶ್ವರ ಸದಸ್ಯರು ಪಡೆದುಕೊಂಡರು.
ಕೋಟೇಶ್ವರ ಲಯನ್ಸ್ ಕ್ಲಬ್‌ನ ಲಯನ್ ರವಿಕಿರಣ್ ಡಿ’ಕೋಷ್ಟ, ಲಯನ್ಸ್ ಆರ್ಡಿ-ಬೆಳ್ವೆ-ಗೋಳಿಯಂಗಡಿಯ ಲಯನ್ ಶಾಲಿನಿ ಮತ್ತು ಲಯನ್ಸ್ ಕ್ಲಬ್ ಕೋಟ-ಗಿಳಿಯಾರಿನ ಲಯನ್ ಸುರೇಶ್ ಕಾರಂತ್ ರೀಜನ್ ಮೀಟ್ ಕಾರ್ಯಕ್ರಮದ “ಲಕ್ಕಿ ಲಯನ್ಸ್” ಗಳಾಗಿ ಹೊರ ಹೊಮ್ಮಿದರು.

ರೀಜನ್ ಮೀಟ್ ಕಮಿಟಿಯ ಚೇಯರ್ ಮ್ಯಾನ್ & ಲಯನ್ಸ್ ಜಿಲ್ಲಾ ಅಂಬಾಸಿಡರ್ ಆದ ಲಯನ್ ಅರುಣ್ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ರೀಜನ್ ಮೀಟ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಲಯನ್ ಕೆದೂರು ಸೀತಾರಾಮ ಶೆಟ್ಟಿ ವಂದಿಸಿದರು.
ಲಯನ್ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು