


ಡೈಲಿ ವಾರ್ತೆ: 03/ಮಾರ್ಚ್ /2025


ಬ್ರಹ್ಮಾವರ| ಬೈಕ್ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ – ಕನ್ನಾರು ಪೇತ್ರಿಯ ಧಾರ್ಮಿಕ ಮುಂದಾಳು ಬಾಲಕೃಷ್ಣ ಶೆಟ್ಟಿ ದುರ್ಮರಣ!
ಬ್ರಹ್ಮಾವರ|ಬೈಕ್ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ.3 ರಂದು ಸೋಮವಾರ ಬ್ರಹ್ಮಾವರ ತಾಲೂಕಿನ ಚಾಂತಾರುನಲ್ಲಿ ಸಂಭವಿಸಿದೆ.
ಮೃತರು ಕನ್ನಾರು ಪೇತ್ರಿಯ ಧಾರ್ಮಿಕ ಮುಂದಾಳು, ಉದಯವಾಣಿ ಪತ್ರಿಕಾ ವಿತರಕ ಬಾಲಚಂದ್ರ ಶೆಟ್ಟಿ (61) ಎಂದು ಗುರುತಿಸಲಾಗಿದೆ.
ಪೇತ್ರಿಯವರಾದ ‘ಬಾಲಣ್ಣ’ ಎಂದೇ ಪ್ರಖ್ಯಾತಿ ಹೊಂದಿದ್ದ ಬಾಲಚಂದ್ರ ಶೆಟ್ಟಿಯವರು ತಮ್ಮ ಪತ್ನಿಯ ಮನೆಯಿಂದ ಪೇತ್ರಿಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದಾಗ ಚಾಂತಾರು ಸಮೀಪ ಕಾರು ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಜನಾ ಮಂಡಳಿಗಳಲ್ಲಿ ಸಕ್ರಿಯರಾಗಿ, ಕನ್ನಾರು ಭಜನಾ ಮಂಡಳಿಯ ಮುಂದಾಳಾಗಿದ್ದ ಬಾಲಚಂದ್ರ ಶೆಟ್ಟಿಯವರು ಉದಯವಾಣಿಯ ಪತ್ರಿಕಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.