

ಡೈಲಿ ವಾರ್ತೆ: 05/ಮಾರ್ಚ್ /2025


ಸೌದಿ ಅರೇಬಿಯಾದಲ್ಲಿ ಬೆಳ್ತಂಗಡಿ ಮೂಲದ ಎರಡು ವರ್ಷದ ಮಗು ಜ್ವರದಿಂದ ಮೃತ್ಯು

ಬೆಳ್ತಂಗಡಿ: ಕನ್ಯಾಡಿಯ ಅಜಿಕುರಿ ನಿವಾಸಿ ಹೈದರ್ ಅಲಿ ಎಂಬವರ ಎರಡು ವರ್ಷದ ಪುತ್ರ ಮಹಮ್ಮದ್ ಅಭಿಯಾನ್ ಎಂಬ ಮಗು ಒಂದೇ ದಿನದ ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ನಿಧನಗೊಂಡಿದೆ.
ಹೈದರ್ ಅಲಿ ಮತ್ತು ಮಹ್ರರೂಫಾ ದಂಪತಿಯ ಇಬ್ಬರು ಪುತ್ರ ಮತ್ತು ಓರ್ವ ಪುತ್ರಿಯ ಪೈಕಿ ಕೊನೆಯ ಮಗುವಾಗಿರುವ ಮುಹಮ್ಮದ್ ಅಭಿಯಾನ್‌ಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತೀವ್ರವಾಗಿ ಜ್ವರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ.
ಬಾಲಕನ ತಂದೆ ಹೈದರ್ ಅಲಿ ಬಿಲ್ಡಿಂಗ್ ಕೆಲಸ ನೋಡಿಕೊಂಡು ಕುಟುಂಬ ಸಹಿತ ಸೌದಿಯಲ್ಲಿದ್ದಾರೆ. ಮೃತ ಮಗುವಿನ ಅಂತ್ಯಸಂಸ್ಕಾರ ಸೌದಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ಸೌದಿ ಅರೇಬಿಯಾದಲ್ಲೇ ನಡೆದಿದೆ.