


ಡೈಲಿ ವಾರ್ತೆ: 14/ಮಾರ್ಚ್ /2025


178 ಪ್ರಯಾಣಿಕರಿದ್ದ ಅಮೆರಿಕ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ: 12 ಮಂದಿಗೆ ಗಾಯ!

ಡೆನ್ವರ್: ಇಲ್ಲಿನ ಡೆನ್ವರ್ ಅಂತರರಾಷ್ಟ್ರೀಯ ವಿಮಾನದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ವಿಮಾನದಲ್ಲಿ ಆರು ಸಿಬ್ಬಂದಿ ಸೇರಿದಂತೆ 178 ಪ್ರಯಾಣಿಕರು ಇದ್ದರು. ಎಲ್ಲರೂ ಸುರಕ್ಷಿತರಾಗಿದ್ದು, 12 ಮಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೊರಾಡೊ ಸ್ಪ್ರಿಂಗ್ಸ್ ವಿಮಾನ ನಿಲ್ದಾಣದಿಂದ ಡಲ್ಲಾಸ್ ಪೋರ್ಟ್ ವರ್ತ್‌ಗೆ ಹೊರಟ್ಟಿದ್ದ ಫ್ಲೈಟ್ 1006 ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡ ಬಳಿಕ ವಿಮಾನವನ್ನು ಡೆನ್ವರ್ ವಿಮಾನ ನಿಲ್ದಾಣದಲ್ಲಿ ಸಂಜೆ 5.15ರ ಹೊತ್ತಿಗೆ ಇಳಿಸಲಾಯಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೈಷನ್ (ಎಫ್‌ಎಎ) ತಿಳಿಸಿದೆ.
ಡೆನ್ವರ್ ವಿಮಾನ ನಿಲ್ದಾಣದ ಸಿ28 ಗೇಟ್ ಪ್ರವೇಶಿಸುತ್ತಿದ್ದಂತೆಯೇ ಬೋಯಿಂಗ್ 737-800 ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು ಎಂದು ಎಫ್‌ಎಎ ಮಾಹಿತಿ ನೀಡಿದೆ.
ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಎಫ್‌ಎಎ ತನಿಖೆಗೆ ಆದೇಶಿಸಿದ್ದು, ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.