ಡೈಲಿ ವಾರ್ತೆ: 17/ಮಾರ್ಚ್ /2025

ಕುಂದಾಪುರ| ಕೊರ್ಗಿ, ನೂಜಿ, ಪಡುಮುಂಡು ಪರಿಸರಗಳಲ್ಲಿ ಕಾಡುಕೋಣ, ಚಿರತೆ ಹಾವಳಿ – ಅರಣ್ಯ ಇಲಾಖೆ ನಿರ್ಲಕ್ಷಕ್ಕೆ ಸ್ಥಳೀಯರ ಆಕ್ರೋಶ

ಕೋಟ: ಕುಂದಾಪುರ ತಾಲೂಕಿನ ಕೊರ್ಗಿ, ನೂಜಿ, ಪಡುಮುಂಡು ಪರಿಸರದಲ್ಲಿ ಚಿರತೆ ಮತ್ತು ಕಾಡುಕೋಣಗಳ
ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಪರಿಸರದಲ್ಲಿ ಸಾರ್ವಜನಿಕರು ಓಡಾಡಲು ಭಯಭಿತರಾಗಿದ್ದಾರೆ.

ಶಾಲಾ ಮಕ್ಕಳು, ಮಹಿಳೆಯರು, ವೃದ್ದರು ಓಡಾಡುವ ಪರಿಸರದಲ್ಲಿ ಇತ್ತೀಚಿಗೆ ಕಾಡುಕೋಣ, ಚಿರತೆ ಪ್ರತ್ಯಕ್ಷವಾಗುತ್ತಿದ್ದು ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಅರಣ್ಯಇಲಾಖೆಯವರು ಇಂತಹ ಪ್ರಾಣಿಗಳನ್ನು ಹಿಡಿದರೆ ಅದನ್ನು ದಟ್ಟ ಅಭಯಾರಣ್ಯಕ್ಕೆ ಬಿಡುವ ಬದಲು ಹತ್ತಿರದಲ್ಲೇ ಇರುವ ಕಾಡಿಗೆ ಬಿಡುತ್ತಾರೆ ಇದರಿಂದಾಗಿ ಅದು ಕಾಡಿಗೆ ಮರಳದೆ ವಾಪಸು ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನಾದರೂ ಅರಣ್ಯಇಲಾಖೆ ಎಚ್ಚೆತ್ತುಕೊಂಡು ಈ ಪರಿಸರದಲ್ಲಿ ಕಾಡುಕೋಣ, ಚಿರತೆಯಿಂದ ಮುಕ್ತಿ ನೀಡಬೇಕೆಂದು ಸ್ಥಳೀಯರು ಅರಣ್ಯಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.