ಡೈಲಿ ವಾರ್ತೆ: 20/ಮಾರ್ಚ್ /2025

ಮಣಿಪಾಲ| ಸಾರ್ವಜನಿಕ ಸ್ಥಳದಲ್ಲೇ ಗಾಂಜಾ ಸೇವನೆ: ಮೂವರ ಬಂಧನ!

ಉಡುಪಿ: ಸಾರ್ವಜನಿಕ ಸ್ಥಳದಲ್ಲೇ ಗಾಂಜಾ, ಅಮಲು ಪದಾರ್ಥ ಸೇವನೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಸಾಹಿಲ್ ಮೆಹ್ರಾ (20), ಶೌನಕ್ ಮುಖೋಪಾಧ್ಯಾಯ (19) ಮತ್ತು ವಾಲುಸ್ಟಾ
ಮಾರ್ಟಿನ್ಸ್ (20) ಎಂದು ತಿಳಿದು ಬಂದಿದೆ.

ಮಣಿಪಾಲದ ಉಪೇಂದ್ರ ಪೈ ಸರ್ಕಲ್ ಸಮೀಪದ ಮದ್ಯದಂಗಡಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಅಮಲಿನ ಸ್ಥಿತಿಯಲ್ಲಿದ್ದ ಇವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಇವರು ಗಾಂಜಾ ಸೇವಿಸಿರುವುದು ದೃಢವಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.