ಡೈಲಿ ವಾರ್ತೆ: 23/ಮಾರ್ಚ್ /2025

ಕ್ರಾಸ್‌ಲ್ಯಾಂಡ್‌ ಸ್ಪಾರ್ಕ್‌2ಕೆ ಗೆ ಚಾಲನೆ:
ಫೆಸ್ಟ್‌ಗಳಿಂದ ಒಟ್ಟಾಗಿ ಕೆಲಸ ಮಾಡುವ ಕೌಶಲ್ಯ-ಜಯಶ್ರೀ ಪಾಟೀಲ್‌

ಬ್ರಹ್ಮಾವರ: ಯೋಜನೆ, ಬಜೆಟ್, ಬಿಕ್ಕಟ್ಟು ನಿರ್ವಹಣೆ ಮತ್ತು ಒಟ್ಟಾಗಿ ಕೆಲಸ ಮಾಡುವಂತಹ ಕೌಶಲ್ಯಗಳನ್ನು ಕಲಿಯಲು ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ನಡೆಯುವ ಫೆಸ್ಟ್‌ಗಳಲ್ಲಿ ಸಹಕಾರಿ ಎಂದು ಬ್ರಹ್ಮಾವರ ಲಿಟ್ಲ್‌ರಾಕ್‌ ಇಂಡಿಯನ್‌ ಸ್ಕೂಲ್‌ನ ಅಧ್ಯಾಪಕಿ ಜಯಶ್ರೀ ಪಾಟೀಲ್‌ ಹೇಳಿದರು.

ಬ್ರಹ್ಮಾವರದ ಕ್ರಾಸ್‌ಲ್ಯಾಂಡ್‌ ಕಾಲೇಜಿನಲ್ಲಿ ಶನಿವಾರ ಅವರು ಅಂತಿಮ ಬಿ.ಎ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪಾರ್ಕ್‌ಕೆ 2025 ಅಂತರ ತರಗತಿ ಸ್ಫರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಬೇಕಾದರೆ , ಕಾಲೇಜು ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ನೀಡಬೇಕು. ಹಿಂದೆ ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶಗಳು ಕಡಿಮೆ ಇತ್ತು. ಆದರೆ ಇಂದು ಅವಕಾಶಗಳು ತುಂಬಾ ಇದೆ. ಜೀವನದಲ್ಲಿ ಗುರಿ ಇರಿಸಿಕೊಂಡು, ಆಸಕ್ತಿ ಬೆಳೆಸಿಕೊಂಡು ಮುಂದೆ ಸಾಗಿದಲ್ಲಿ ಯಶಸ್ಸು ಕಾಣಬಹುದು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್‌ಕ್ಲೈವ್‌ ಅಧ್ಯಕ್ಷತೆ ವಹಿಸಿದ್ದರು.
ಉಪಪ್ರಾಂಶುಪಾಲ ಬಿಜು ಜೇಕಬ್‌, ಕಾರ್ಯಕ್ರಮದ ಸಂಯೋಜಕರಾದ ಸ್ಮಿತಾ ಮೈಪಾಡಿ, ದೀಪಾ ಕಿತ್ತೂರು ಇದ್ದರು.

ವಿದ್ಯಾರ್ಥಿ ಸಂಯೋಜಕರಾದ ಐಶ್ವರ್ಯ ಸ್ವಾಗತಿಸಿದರು. ರಚನಾ ವಂದಿಸಿದರು. ಅಜಯ್‌ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಡೆದ

ಬಹುಮಾನ ವಿತರಣಾ ಸಮಾರಂಭದಲ್ಲಿ ಇಂಡಿಯನ್‌ ಥಿಯೋಲಾಜಿಕಲ್‌ ಸೆಮೆನರಿಯ ಉಪನ್ಯಾಸಕ ಶಾಜಿ ಮ್ಯಾಥ್ಯೂ ಚಾಕೋ ಬಹುಮಾನ ವಿತರಿಸಿದರು.