


ಡೈಲಿ ವಾರ್ತೆ: 23/ಮಾರ್ಚ್ /2025


ಮಂದಾರ್ತಿ| ರಸ್ತೆಗೆ ಅಡ್ಡ ಬಂದ ದನ ತಪ್ಪಿಸಲು ಹೋಗಿ ಕಾರು ಅಪಘಾತ – ಇಬ್ಬರು ಗಂಭೀರ ಗಾಯ

ಕೋಟ| ರಸ್ತೆಗೆ ಅಡ್ಡ ಬಂದ ದನ ತಪ್ಪಿಸಲು ಹೋಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಭಾನುವಾರ ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಸಮೀಪದ ಶಿರೂರು ಮೂರ್ಕೈ ಬಳಿ ಸಂಭವಿಸಿದೆ.
ಗೋಳಿಯಂಗಡಿ ಕಡೆಯಿಂದ ಬರುತ್ತಿದ್ದ ಮಾರುತಿ ಇಕೋ ಕಾರು ಮಂದಾರ್ತಿಯ ಶಿರೂರು ಮೂರ್ಕೈ ಸಮೀಪ ಬರುತ್ತಿದ್ದ ವೇಳೆ ದನವೊಂದು ರಸ್ತೆಗೆ ಅಡ್ಡ ಬಂದಿದೆ. ತಕ್ಷಣ ಚಾಲಕ ಬ್ರೇಕ್ ಹಾಕುವ ಭರದಲ್ಲಿ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.
ಕಾರಿನಲ್ಲಿ ಬಾವಿ ರಿಂಗ್ ಕೆಲಸ ಮಾಡುವ ಕಾರ್ಮಿಕರು ಪ್ರಯಾಣಿಸುತ್ತಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.