


ಡೈಲಿ ವಾರ್ತೆ: 24/ಮಾರ್ಚ್ /2025


ಲಕ್ಷ್ಮೇಶ್ವರ| ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಗದಗ: 2024-25 ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾ. 22 ರಿಂದ 23ರ ನಡೆಸಲಾಯಿತು.

ಈ ಕ್ರೀಡಾಕೂಟದಲ್ಲಿ ಲಕ್ಷ್ಮೇಶ್ವರ ತಾಲೂಕಿನ ನೌಕರರು ಭಾಗವಹಿಸಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ನೌಕರರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗುಂಪು ಆಟಗಳಲ್ಲಿ ಖೋ ಖೋ ಪ್ರಥಮ ಸ್ಥಾನ, ಕಬಡ್ಡಿ ದ್ವಿತೀಯ ಸ್ಥಾನ,ವಾಲಿಬಾಲ್ ದ್ವಿತೀಯ ಸ್ಥಾನ, 4*100 ರಿಲೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಎ ಎ ನಧಾಫ ಸ್ವಿಮ್ಮಿಂಗ್ ಪ್ರಥಮ,ಶ್ರೀಕಾಂತ ನಂದೆಣ್ಣವರ 130 ಕೆಜಿ ಭಾರ ಎತ್ತುವುದು ಪ್ರಥಮ, ಫಕೀರೇಶ ಡಂಬಳ 400 ಮೀಟರ್ ರನ್ನಿಂಗ್ ಪ್ರಥಮ, ಆನಂದ ಮುಳಗುಂದ ಪ್ರೀ ಸ್ಟೈಲ್ ಕುಸ್ತಿ ದ್ವಿತೀಯ, ಎನ್ ಎಸ್ ಬಂಕಾಪುರ ಸ್ವಿಮ್ಮಿಂಗ್ ದ್ವಿತೀಯ, ಸಂತೋಷ್ ರಾಥೋಡ್ ಚಕ್ರ ಎಸೆತ ಪ್ರಥಮ, ಅಜಿತ್ ಬಾಣದ ಭಾರ ಎತ್ತುವುದು ಪ್ರಥಮ,ಪ್ರವೀಣ್ ಬರಡಿ ಗುಂಡು ಎಸೆತ ಪ್ರಥಮ,ಆರ್ ಕೆ ಹಡಪದ 200 ಮೀಟರ್ ರನ್ನಿಂಗ್ ದ್ವಿತೀಯ, ತೇಜಸ್ ಕರ್ಜಗಿ 800 ಮೀಟರ್ ಓಟ ಪ್ರಥಮ, ಭಾರತಿ ಚೌಡಾಪೂರ ಯೋಗ ಪ್ರಥಮ,ಕಾವೇರಿ ಸುಣಗಾರ ಚದುರಂಗ ಪ್ರಥಮ,ಎಂ ಎಂ ಶಿವಶಿಂಪಿ 200 ಮೀಟರ್ ಬಟರ್ ಫ್ಲೈ ದ್ವಿತೀಯ, ರಮೇಶ್ ಹೊಂಬಳ ಉದ್ದ ಜಿಗಿತ ಪ್ರಥಮ, ಜಿ ಪಿ ನಾವಿ 50 ಮೀಟರ್ ಸ್ವಿಮ್ಮಿಂಗ್ ದ್ವಿತೀಯ ಈ ರೀತಿ ಪ್ರಶಸ್ತಿ ಪಡೆದು ಲಕ್ಷ್ಮೇಶ್ವರ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇವರೆಲ್ಲರಿಗೂ ಲಕ್ಷ್ಮೇಶ್ವರ ತಾಲೂಕಿನ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಗುರುರಾಜ್ ಡಿ ಹವಳದ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಡಿ ಎಚ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ನೌಕರರ ಸಂಘದ ಕಾರ್ಯದರ್ಶಿ ಎಂ ಎ ನದಾಫ, ಎಂ ಡಿ ವಾರದ ಖಜಾಂಚಿ, ಎ ಬಿ ಗೌಡರ ರಾಜ್ಯ ಪರಿಷತ್,ನೌಕರರ ಸಂಘದ ನಿರ್ದೇಶಕರುಗಳಾದ ಆನಂದ್ ಕರ್ಜಗಿ,ಎ ಎಂ ಅಕ್ಕಿ,ಬಿ ಎಂ ಯರಗುಪ್ಪಿ, ಗಿರೀಶ್ ಕುಂಬಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷರಾದ ಬಿ ಎಸ್ ಹರಲಾಪೂರ, ಕಾರ್ಯದರ್ಶಿ ಚಂದ್ರು ನೇಕಾರ,ಬಿ ಬಿ ಯತ್ತಿನಹಳ್ಳಿ, ಡಿ ಡಿ ಲಮಾಣಿ , ಎಂ ಎಸ್ ಹಿರೇಮಠ ಮೊದಲಾದ ನೌಕರ ಬಂದುಗಳು ಭಾಗವಹಿಸಿ ತಾಲೂಕಿನ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ ಲಕ್ಷ್ಮೇಶ್ವರ ತಾಲೂಕಿನ ಎಲ್ಲಾ ಸರ್ಕಾರಿ ನೌಕರರಿಗೆ ಲಕ್ಷ್ಮೇಶ್ವರ ತಾಲೂಕ ಶಾಖೆಯ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು.