


ಡೈಲಿ ವಾರ್ತೆ: 24/ಮಾರ್ಚ್ /2025


ಮಲ್ಪೆ ಮಹಿಳೆಗೆ ಹಲ್ಲೆ ಪ್ರಕರಣ| ಕೇಸ್ ವಾಪಾಸ್ ಪಡೆಯಲು ಜಿಲ್ಲಾಧಿಕಾರಿಗೆ ಸಂತ್ರಸ್ತ ಮಹಿಳೆ ಮನವಿ – ಕೇಸ್ ಕೋರ್ಟ್ ನಲ್ಲಿದೆ ಎಂದ ಡಿಸಿ

ಉಡುಪಿ ಮಾರ್ಚ್ 24: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕಣರಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮಹಿಳೆ ಜಾತಿ ನಿಂಧನೆ ಕೇಸ್ ವಾಪಾಸು ಪಡೆಯಲು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಸಂತ್ರಸ್ತ ಮಹಿಳೆ ಹಾಗೂ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಹಲ್ಲೆ ಪ್ರಕರಣ ರಾಜಿಯಲ್ಲಿ ಮುಗಿದಿತ್ತು, ನನಗೆ ಅಕ್ಷರ ಅಭ್ಯಾಸ ಇಲ್ಲ, ಯಾವುದಕ್ಕೆ ಸಹಿ ಪಡೆದಿದ್ದಾರೆ ಎಂದು ಗೊತ್ತಿಲ್ಲ. ಮೀನುಗಾರ ಮಹಿಳೆಯರ ಮೇಲೆ ಕೇಸು ದಾಖಲಿಸಿದ ಬಗ್ಗೆ ನನಗೆ ಗೊತ್ತಿರಲಿಲ್ಲ ಎಂದರು. ನಮಗೆ ಯಾರು ಜಾತಿನಿಂದನೆ ಮಾಡಿಲ್ಲ, ಇಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ, ನಮಗೆ ಯಾರು ಜಾತಿ ಪ್ರಶ್ನೆ ಮಾಡಿಲ್ಲ ಎಂದರು. ಆದರೆ ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಕರಣ ನ್ಯಾಯಾಲಯದಲ್ಲಿದೆ ಏನು ಮಾಡಲು ಸಾಧ್ಯವಿಲ್ಲ ಎಂದರು, ನಿಮ್ಮ ವಕೀಲರ ಮೂಲಕ ನ್ಯಾಯಾಲಯದಲ್ಲಿ ಪ್ರಯತ್ನಿಸಿ ಎಂದರು.
ನಮಗೆ ಯಾರು ಜಾತಿನಿಂದನೆ ಮಾಡಿಲ್ಲ ಎಂದು ಆಕ್ಷೇಪಿಸಿದ ಬಂಜಾರ ಸಮುದಾಯದ ಮಹಿಳೆಯರು, ಇಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ಯಾರು ಜಾತಿ ಪ್ರಶ್ನೆ ಮಾಡಿಲ್ಲ ಎಂದರು. ಪ್ರಕರಣದ ವಿಡಿಯೋ ವೈರಲ್ ಆಗಿದೆ ಎಂದ ಜಿಲ್ಲಾಧಿಕಾರಿ, ವಿಡಿಯೋದಲ್ಲಿ ಜಾತಿ ನಿಂದನೆ ಮಾಡಿದ್ದಾರಾ? ಎಂದು ಮಹಿಳೆಯರು ಪ್ರಶ್ನಿಸಿದರು. ಈ ವೇಳೆ ಜಿಲ್ಲಾಧಿಕಾರಿ ಸುಮ್ನಿರಿ ಎಂದಿದ್ದಾರೆ. ಕದ್ದ ಮೀನು ಎಲ್ಲಿಟ್ಟಿದೀಯಾ ಎಂದು ವಿಡಿಯೋದಲ್ಲಿ ಕೇಳಿದ್ದಾರೆ. ಕೇಸ್ ಆಗ್ಬಿಟ್ಟಿದೆ ಎಂದರು. ನಮ್ಮ ಪರವಾಗಿ ಯಾರಿಗೂ ಒತ್ತಾಯ ಹಾಕಲು ಬಿಡಬೇಡಿ ಎಂದಿದ್ದಾರೆ ಬಂಜಾರ ಸಮುದಾಯದ ಕಾರ್ಮಿಕರು. ಇದು ನಾವೇ ಕೂತು ಬಗೆಹರಿಸಿಕೊಳ್ಳುವ ಸಮಸ್ಯೆ. ಪ್ರಮೋದ್ ಮಧ್ವರಾಜ್ ಅವರದ್ದು ಏನು ತಪ್ಪಿಲ್ಲ. ಕರೋನಾ ಸಮಯದಲ್ಲಿ ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಅವರ ಮೇಲೆ ಯಾಕೆ ಕೇಸ್ ದಾಖಲಿಸಿದ್ದೀರಿ ಎಂದು ತರಾಟೆ ತೆಗೆದುಕೊಂಡರು. ಜಾತಿ ನಿಂದನೆ ಸೆಕ್ಷನ್ ಕೈಬಿಡಲು ಒತ್ತಾಯಿಸಿದ್ದಾರೆ.