


ಡೈಲಿ ವಾರ್ತೆ: 27/ಮಾರ್ಚ್/2025


ಶ್ರೀರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ವತಿಯಿಂದ ಸರ್ಕಾರಿ ಶಾಲೆ ಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಕೋಟ|ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣದ ಶ್ರೀರಾಮ ಗೆಳೆಯರ ಬಳಗ ಇವರ ತೃತೀಯ ವರ್ಷದ ರಾಮ ಪರ್ವದ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕಿನ
ಎಸ್ಸೆಸ್ಸೆಲ್ಸಿ , ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಟ್ಟು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರು ಪುನೀತ್ ಪೂಜಾರಿ, ಉಪಾಧ್ಯಕ್ಷರು ಯಾದವ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಅಕ್ಷಿತ್ ಪೂಜಾರಿ,ಕೋಶಾಧಿಕಾರಿ ಕಾರ್ತಿಕ್ ಕುಂದರ್, ಶಬರೀಷ್ ಮೆಂಡನ್, ಪ್ರತಾಪ್ ಸುವರ್ಣ, ದರ್ಶನ್ ಕಾಂಚನ್,
ಸದ್ಯಸರುಗಳಾದ ಧನುಷ್ ಕುಂದರ್, ಭುವನ್ ಬಂಗೇರ , ಸಾತ್ವಿಕ್, ಪ್ರಜ್ವಲ್ ಖಾರ್ವಿ, ವರುಣ್ ಕುಂದರ್, ಸೌರವ್ ಪೂಜಾರಿ ಮೊದಲದವರು ಭಾಗಿಯಾಗಿದ್ದರು.