


ಡೈಲಿ ವಾರ್ತೆ: 08/ಏಪ್ರಿಲ್/2025


ಬಂಟ್ವಾಳ|ಚಂಡಮಾರುತದ ಶೈಲಿಯಲ್ಲಿ ಸುಂಟರಗಾಳಿ, ಹಲವು ಮರಗಳು ಧರಾಶಾಯಿ

ಬಂಟ್ವಾಳ : ಮಂಗಳವಾರ (ಇಂದು) ಸಂಜೆ ಸುಮಾರು 4.30 ರ ವೇಳೆಯಲ್ಲಿ ಚಂಡಮಾರುತದ ಶೈಲಿಯಲ್ಲಿ ಬಂದ ಸುಂಟರಗಾಳಿ, ಮಳೆಗೆ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾಗಿದ್ದು, ಮರಗಳು ಧರೆಗುರುಳಿದಿದೆ, ಅನೇಕ ಕಡೆಗಳಲ್ಲಿ ಹಾಕಲಾದ ಬ್ಯಾನರ್ ಸಹಿತ ತಗಡು ಶೀಟುಗಳು ಹಾರಿ ಹೋಗಿದ್ದು ಈವರೆಗೆ ಯಾವುದೇ ಪ್ರಾಣಕ್ಕೆ ಅಪಾಯವನ್ನು ತಂದ ಘಟನೆಗಳ ಬಗ್ಗೆ ವರದಿಯಾಗಿಲ್ಲ.
ಮಾಣಿ ಸಮೀಪದ ನೇರಳಕಟ್ಟೆ ಎಂಬಲ್ಲಿ ತೆಂಗಿನ ಮರ ಹಾಗೂ ವಿದ್ಯುತ್ ಕಂಬವೊಂದು ಹೆದ್ದಾರಿ ಮಧ್ಯೆ ಬಿದ್ದಿದ್ದು ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಮೆಸ್ಕಾಂ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಲಾಗಿದ್ದು ಪ್ರಸ್ತುತ ರಸ್ತೆ ಸಂಚಾರ ಸುಗಮಗೊಂಡಿರುತ್ತದೆ
ಬಾಳ್ತಿಲ ಗ್ರಾಮದ ಬೇಬಿ ಕೋಂ ಕಿಟ್ಟು ನಲ್ಕೆಯವರ ವಾಸ್ತವ್ಯದ ಮನೆಯ ಶೀಟು ಛಾವಣಿಗೆ ಮಳೆ ಗಾಳಿಯಿಂದ ಹಾನಿಯಾಗಿರುತ್ತದೆ.
ನಾವೂರು ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಮಹಮ್ಮದ್ ಇಸಾಕ್ ಬಿನ್ ಇಬ್ರಾಹಿಂ ರವರ ವಾಸ್ತವ್ಯದ ಮನೆ ಹಾನಿಯಾಗಿದೆ.