ಡೈಲಿ ವಾರ್ತೆ: 11/ಏಪ್ರಿಲ್/2025

ದಕ್ಷಿಣ ಕನ್ನಡ| ಬೆಳ್ಳಂಬೆಳಗ್ಗೆ ಗುಡುಗು- ಮಳೆ ಆರ್ಭಟ

ಮಂಗಳೂರು: ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆ ಆರ್ಭಟ ಜೋರಾಗಿತ್ತು.
ನಗರದ ವಿವಿಧೆಡೆ ಶುಕ್ರವಾರ ಬೆಳಗ್ಗೆಯೇ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಯಿಂದ ಎಡೆಬಿಡದೆ ವರ್ಷಧಾರೆ ಸುರಿದಿದೆ.
ದಿಢೀರ್ ಮಳೆಯಿಂದಾಗಿ ಸಾರ್ವಜನಿಕರು ಹೈರಾಣಾದರು. ದಿನನಿತ್ಯದ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಪರದಾಡುವಂತಾಯಿತು.

ಇದೀಗ ಮಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಇಂದು 25 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.