


ಡೈಲಿ ವಾರ್ತೆ: 11/ಏಪ್ರಿಲ್/2025


ಮಣೂರು ಪಡುಕರೆಯ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಾಧನೆ

ಕೋಟ: ಬ್ರಹ್ಮಾವರ ತಾಲೂಕಿನ ಮಣೂರು ಪಡುಕರೆಯ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದೆ.
ಕಾಲೇಜಿನ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಖದೀಜಾ ಝಾಹೀಮಾ 570 ಅಂಕಗಳು, ಫಾತಿಮಾತುಲ್ ಮಿಸ್ರಿಯ 543, ನಿಶಾ ಎಸ್ 526, ಸೃಜನಾ 519, ನಿಶಾ ಎನ್ 514, ಶಮ್ರೀನ್ 506 ಹಾಗೂ ವಿಜ್ಞಾನ ವಿಭಾಗದ ಹೇಮಂತ್ 496 ಅಂಕಗಳನ್ನು ಗಳಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ, ಅಧ್ಯಾಪಕರು, ಹಾಗೂ ಪೋಷಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಶುಭಕೋರಿದರು.