


ಡೈಲಿ ವಾರ್ತೆ: 18/ಏಪ್ರಿಲ್/2025


ಕೋಟ| ತಂಡಗಳ ನಡುವೆ ಗಲಾಟೆ, ಹಲವರು ವಶಕ್ಕೆ

ಕೋಟ: ಎರಡು ವರ್ಷಗಳ ಹಿಂದೆ ಗಣೇಶ ಹಬ್ಬದ ಡಿಜೆ ವಿಷಯದಲ್ಲಿ ಉಂಟಾದ ಮನಸ್ತಾಪ ಮತ್ತೆ ಮರುಕಳಿಸಿ ಗುರುವಾರ ರಾತ್ರಿ ಯುವಕರು ಮತ್ತೆ ಗಲಾಟೆ ಮಾಡಿಕೊಂಡ ಘಟನೆ ಕೋಟತಟ್ಟು ದಾನುಗುಂದಿನಲ್ಲಿ ನಡೆದಿದೆ.
ಕೋಟ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಘವೇಂದ್ರ ಅವರಿಗೆ ಬಂದ ಮಾಹಿತಿಯನ್ವಯ ಗುರುವಾರ ತಡರಾತ್ರಿ ಕೋಟತಟ್ಟು ಗ್ರಾಮದ ದಾನಗುಂದ ಸೇತುವೆ ಮೇಲೆ ಕೆಲವು ಜನರು ಗಲಾಟೆ ಮಾಡಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು.
ಸ್ಥಳಕ್ಕೆ ಹೋಗಿದ್ದ ಪೋಲೀಸರನ್ನು ನೋಡಿ ಕೆಲವರು ಓಡಿ ಹೋಗಿದ್ದು, ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.