


ಡೈಲಿ ವಾರ್ತೆ: 18/ಏಪ್ರಿಲ್/2025


ಕೋಟ| ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ: ಅಧ್ಯಕ್ಷರಾಗಿ ಸತೀಶ್.ಹೆಚ್. ಕುಂದರ್ ಅವಿರೋಧ ಆಯ್ಕೆ

ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಏ. 18 ರಂದು ಶುಕ್ರವಾರ ರಚನೆಗೊಂಡಿತ್ತು.
ಸಭೆಯಲ್ಲಿ ಶ್ರೀ ಸತೀಶ್.ಹೆಚ್. ಕುಂದರ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಮಿತಿಯ ಇತರ ಸದಸ್ಯರಾಗಿ ರವಿ ಐತಾಳ್ ಅರ್ಚಕರು, ಅಶೋಕ್ ಶೆಟ್ಟಿ, ಕೊಯ್ಕೂರು,
ಕೃಷ್ಣ ದೇವಾಡಿಗ ಹರ್ತಟ್ಟು, ಅಚ್ಯುತ ಹಂದೆ ಮಣೂರು,
ದಿನೇಶ್ ಆಚಾರ್ಯ ಮಣೂರು, ಶ್ರೀಮತಿ ಸುಫಲ ಶೆಟ್ಟಿ ಮಣೂರು,ಶ್ರೀಮತಿ ದಿವ್ಯ ಪ್ರಭು ಮಣೂರು, ಚಂದ್ರ ಹರ್ತಟ್ಟು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.