



ಡೈಲಿ ವಾರ್ತೆ: 10/MAY/2025


ಸಕಲೇಶಪುರ|ವಿದ್ಯುತ್ ಅಘಾತದಿಂದ ಕಾಡಾನೆ ಸಾವು

ಸಕಲೇಶಪುರ: ತಾಲ್ಲೂಕಿನ ಸುಳ್ಳಕ್ಕಿ-ಶಾಂತಪುರ ಗ್ರಾಮದ ಬಳಿ ದೈತ್ಯಾಕಾರದ ಆನೆಯೊಂದು ವಿದ್ಯುತ್ ಆಘಾತದಿಂದ ಶುಕ್ರವಾರ ರಾತ್ರಿ ವಿದ್ಯುತ್ ಕಂಬದಿಂದ ಎರಡು ಅಡಿ ದೂರದಲ್ಲಿ ಮೃತಪಟ್ಟಿದೆ.
ರಸ್ತೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಆನೆ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಆರಂಭದಲ್ಲಿ ವಿದ್ಯುತ್ ಆಘಾತ, ಗುಂಡೇಟು ಅಥವಾ ವಾಹನ ಡಿಕ್ಕಿಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಮರದಲ್ಲಿ ತುಂಡಾಗಿದ್ದ ವಿದ್ಯುತ್ ತಂತಿ, ಆನೆಯ ಸೊಂಡಿಲಿಗೆ ತಾಗಿದ್ದು, ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾಗಿ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
18-20 ವರ್ಷದ ಆನೆ ಇದಾಗಿದ್ದು, ಎರಡೂ ದಂತಗಳಿವೆ. ಆನೆ ಸಾವಿನ ಸುದ್ದಿ ಕೇಳಿ ಮಹಿಳೆಯರು, ಮಕ್ಕಳು ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದರು.
ಸ್ಥಳಕ್ಕೆ ಅರಣ್ಯ ಇಲಾಖೆ, ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.