



ಡೈಲಿ ವಾರ್ತೆ: 19/MAY/2025


ಮಂಗಳೂರು |ಸುಹಾಸ್ ಹತ್ಯೆ ಪ್ರಕರಣದ ಆರೋಪಿಗಳು ಮತ್ತು ಇನ್ನೊಂದು ಗ್ಯಾಂಗ್ ನಡುವೆ ಮಾರಾಮಾರಿ!

ಮಂಗಳೂರು : ನಗರದ ಕೊಡಿಯಾಲಬೈಲ್ ನ ಜಿಲ್ಲಾ
ಕಾರಾಗೃಹದಲ್ಲಿ ಸೋಮವಾರ ರಾತ್ರಿ 7 ಗಂಟೆಗೆ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸುಹಾಸ್ ಹತ್ಯೆ ಪ್ರಕರಣದ ಆರೋಪಿಗಳು ಮತ್ತು ಇನ್ನೊಂದು ಗ್ಯಾಂಗ್ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.
ಜೈಲಿಗೆ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಭೇಟಿ ನೀಡಿದ್ದಾರೆ. ಜೈಲಿನ ಸುತ್ತ ಪೊಲೀಸ್ ಬಿಗು ಭದ್ರತೆ ಕೈಗೊಳ್ಳಲಾಗಿದೆ
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.