



ಡೈಲಿ ವಾರ್ತೆ: 19/MAY/2025


ಕೋಟ| ಸಂಸ್ಕೃತಿ ಸಂಭ್ರಮ ಟ್ರಸ್ಟ್ ವತಿಯಿಂದ ರಿಯಾಯಿತಿ ದರದಲ್ಲಿ ಕಾಶಿ ಯಾತ್ರೆ

ಕೋಟ: ಸಂಸ್ಕೃತಿ ಸಂಭ್ರಮ ಟ್ರಸ್ಟ್ ಆಯೋಜನೆಯಲ್ಲಿ ಮೇ. 19 ರಂದು ಸೋಮವಾರ ಸಾಲಿಗ್ರಾಮದಿಂದ 27 ಮಂದಿ ಬೆಂಗಳೂರಿಗೆ ಬಸ್ ಮೂಲಕ ಹೊರಟು ಬೆಂಗಳೂರಿನಿಂದ ವಿಮಾನ ಮೂಲಕ ವಾರಾಣಸಿ ತಲುಪಲಿದ್ದಾರೆ.
ಕಾಶಿ ವಿಶ್ವೇಶ್ವರನ ದರ್ಶನ , ತ್ರಿವೇಣಿ ಸಂಗಮ, ಗಂಗಾರತಿ ಸೇರಿದಂತೆ ಮೂರು ದಿನಗಳ ಕಾಲ ಪುಣ್ಯ ಕ್ಷೇತ್ರ ದರ್ಶನ ಪಡೆಯಬಹುದು ಎಂದು ಟ್ರಸ್ಟ್ ಪ್ರಮುಖರಾದ ರಮೇಶ್ ಮೆಂಡನ್ ಸಾಲಿಗ್ರಾಮ ತಿಳಿಸಿದರು.

ಹಿರಿಯರು, ಮದ್ಯಮ ವರ್ಗದವರಿಗೂ ಕೂಡ ವಿಮಾನ ಮೂಲಕ ಪುಣ್ಯ ಕ್ಷೇತ್ರ ದರ್ಶನದ ಅವಕಾಶ ಮಾಡಿ ಕೊಡುವ ಉದ್ದೇಶ ನಮ್ಮ ಟ್ರಸ್ಟ್ ನ ಚಿಂತನೆಯಾಗಿದೆ ಎಂದು ಟ್ರಸ್ಟ್ ನ ಕೇಶವ ನೈರಿ ಕಾರ್ಕಡ ಇವರು ಹೇಳಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗಿರಿಜಾ ಪೂಜಾರಿ ಸೇರಿದಂತೆ 27 ಮಂದಿ ಇಂದಿನ ತಂಡದಲ್ಲಿ ಪ್ರಯಾಣ ಬೆಳಸಿದರು.