ಡೈಲಿ ವಾರ್ತೆ: 19/MAY/2025

ಮಂಗಳೂರು: ಜೈಲಿನಲ್ಲಿ ಸುಹಾಶ್ ಶೆಟ್ಟಿ ಹತ್ಯೆ ಆರೋಪಿ ನೌಷದ್ ಮೇಲೆ ಹಲ್ಲೆಗೆ ಯತ್ನ – ಪ್ರಾಣಾಪಾಯದಿಂದ ಪಾರು!

ಮಂಗಳೂರು: ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚೊಟ್ಟೆ ನೌಷದ್ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಮೇ. 19 ರಂದು ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ನಗರದ ಕೊಡಿಯಾಲಬೈಲ್ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಆರೋಪಿ ನೌಷದ್ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡಿತ್ತು. ಹೀಗಾಗಿ ಕಾನೂನು ಪ್ರಕ್ರಿಯೆ ಮುಗಿಸಲು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಪೊಲೀಸರು ಮಂಗಳೂರಿನಿಂದ ಮೈಸೂರು ಜೈಲಿಗೆ ನೌಷಾದ್ ಸ್ಥಳಾಂತರಿಸಲು ಮುಂದಾಗಿದ್ದರು. ಇದರ ನಡುವೆ ಮಂಗಳೂರು ಜೈಲಿನಲ್ಲಿ ಆಪ್ತರನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿದ್ದ ಕಾರಣ ಮಂಗಳೂರು ಜೈಲಿಗೆ ನೌಷಾದ್‌ನ ಕರೆತರಲಾಗಿತ್ತು. ಕಾದು ಕುಳಿತಿದ್ದ ಇತರ ಖೈದಿಗಳು ನೌಷಾದ್ ಮೇಲೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ಆದರೆ ಪೊಲೀಸರು ಮದ್ಯಪ್ರವೇಶದಿಂದ ನೌಷಾದ್ ಪಾರಾಗಿದ್ದಾರೆ.