



ಡೈಲಿ ವಾರ್ತೆ: 22/MAY/2025


ಮೊಳಹಳ್ಳಿ: (ಕಾಜಾಡಿ ಮನೆ) ಭಾರಿ ಮಳೆಗೆ ಧರೆ ಕುಸಿತ, ಅಪಾರ ಹಾನಿ!

ವರದಿ: ಸಂತೋಷ್ ಶೆಟ್ಟಿ ಮೊಳಹಳ್ಳಿ
ಮೊಳಹಳ್ಳಿ: ಕುಂದಾಪುರ ತಾಲೂಕು ವ್ಯಾಪ್ತಿಯ ಮೊಳಹಳ್ಳಿ ಗ್ರಾಮ ಪಂಚಾಯತ್ ಸಮೀಪದ ಮೊಳಹಳ್ಳಿ 4ನೇ ವಾರ್ಡ್ ನ ಕಾಜಾಡಿ ಮನೆಯ ಜಗನ್ನಾಥ್ ಶೆಟ್ಟಿ ಅವರ ಮನೆಯ ಹಿಂಭಾಗದ ಭದ್ರತಾ ತಡೆಗೋಡೆಯು, ಸುರಿದ ಭಾರಿ ಮಳೆಗೆ ಕುಸಿದು ಅಪಾರ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಮೊಳಹಳ್ಳಿ ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ್ ನ ಪ್ರಭಾರ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ದ್ಯಾವಲಬೆಟ್ಟು, ಇವರು ಸೂಕ್ತ ಪರಿಹಾರವನ್ನ ತಾಲೂಕಿನ ತಹಸಿಲ್ದಾರರ ಮೂಲಕ ನೀಡುವ ಭರವಸೆಯನ್ನು ನೀಡಿದ್ದಾರೆ.
ಹಾನಿಯ ಕುರಿತಂತೆ ಈಗಾಗಲೇ ಕುಂದಾಪುರ ತಹಶೀಲ್ದಾರರಿಗೆ ಮಾಹಿತಿಯನ್ನು ತಿಳಿಸಲಾಗಿದೆ. ಅಪಾರ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಮನವಿಯಲ್ಲಿ ತಿಳಿಸಿಕೊಂಡಿದ್ದಾರೆ. ತಕ್ಷಣ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಕುಟುಂಬಸ್ಥರು ಧನ್ಯವಾದ ಸಮರ್ಪಿಸಿದ್ದಾರೆ.