ಡೈಲಿ ವಾರ್ತೆ: 27/MAY/2025

ಕೋಟೇಶ್ವರ| 2 ಬೈಕ್‌ಗಳಿಗೆ ಕಾರು ಢಿಕ್ಕಿ – ಇಬ್ಬರು ಸವಾರರಿಗೆ ಗಾಯ

ಕುಂದಾಪುರ: ಕಾರು ಢಿಕ್ಕಿಯಾಗಿ ಎರಡು ಬೈಕ್‌ಗಳ ಇಬ್ಬರು
ಸವಾರರು ಗಾಯಗೊಂಡ ಘಟನೆ ಕೋಟೇಶ್ವರ – ಹಾಲಾಡಿ ರಸ್ತೆಯ ಕಾಳಾವರ ರೈಲ್ವೇ ಮೇಲ್ವೇತುವೆ ಬಳಿ ಸಂಭವಿಸಿದೆ.

ಅಜಯ್ ಹಾಗೂ ಪ್ರಶಾಂತ್ ಗಾಯಗೊಂಡವರು. ಇವರು ಇಬ್ಬರು ಪ್ರತ್ಯೇಕ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದಾಗ ಬೆಂಗಳೂರಿನಿಂದ ಉಡುಪಿ ಕಡೆಗೆ ಪ್ರವಾಸಕ್ಕೆಂದು ಬಾಡಿಗೆ ಮಾಡಿಕೊಂಡು ಬಂದಿದ್ದ ಸಂಜಯ್‌ ಅವರು ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಾಯಗೊಂಡ ಪ್ರಶಾಂತ್ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ, ಅಜಯ್‌ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಕಾರು ಬಾಡಿಗೆಗೆ ಮಾಡಿಕೊಂಡು ಬಂದಿದ್ದ ಪರಶುರಾಮ ಅವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.