



ಡೈಲಿ ವಾರ್ತೆ: 16/JUNE/2025


ಬಾಲಕ ನಾಪತ್ತೆ – ದೂರು ದಾಖಲು

ಕುಂದಾಪುರ: ಸಮೀಪದ ಗಂಗೊಳ್ಳಿ ಗ್ರಾಮದಿಂದ 13ವರ್ಷ ಪ್ರಾಯದ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ಫಾಝ ಎಂಬ ಬಾಲಕ ಜೂ. 16 ರಂದು ಸೋಮವಾರ ಬೆಳಿಗ್ಗೆ ಸುಮಾರು 8ಗಂಟೆಯಿಂದ ನಾಪತ್ತೆ ಯಾಗಿದ್ದಾನೆ.

ಸದ್ರಿ ಬಾಲಕನ ಪತ್ತೆ ಅಥವಾ ಎಲ್ಲಿಯಾದರೂ ಕಂಡು ಬಂದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ 08254265333, 9480805457 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.