



ಡೈಲಿ ವಾರ್ತೆ: 20/JUNE/2025


ಅಮಾಸೆಬೈಲು|ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಯುವತಿ ಮೃತ್ಯು!

ಕುಂದಾಪುರ: ಯುವತಿಯೋರ್ವಳು ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿ ಎಂಬಲ್ಲಿ ನಡೆದಿದೆ.
ಮೃತ ಯುವತಿ ಮೂಕಾಂಬಿಕಾ(23) ಎಂದು ಗುರುತಿಸಲಾಗಿದೆ.
ಈಕೆ ದನಗಳಿಗೆ ಹುಲ್ಲು ತರಲು ಅತ್ತಿಗೆಯೊಂದಿಗೆ ತೋಟಕ್ಕೆ ಹೋಗಿದ್ದರು. ಹಿಂದಿರುಗಿ ಬರುವಾಗ ಕಾಲುಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಅಣೆಕಟ್ಟಿನಲ್ಲಿ ಮೂಕಾಂಬಿಕಾಳ ಮೃತದೇಹ ಪತ್ತೆಯಾಗಿದೆ.