ಡೈಲಿ ವಾರ್ತೆ: 22/JUNE/2025

ಅಮೆರಿಕ ನಡೆಸಿದ ದಾಳಿಯಿಂದ ಪರಮಾಣು ಸೋರಿಕೆಯಾಗಿಲ್ಲ: ಇರಾನ್ ಸ್ಪಷ್ಟನೆ.!
ನೀವು ಆರಂಭಿಸಿದ್ದೀರಿ ನಾವು ಕೊನೆಗೊಳಿಸುತ್ತೇವೆ ಅಮೆರಿಕಾ ದಾಳಿ ಬೆನ್ನಲ್ಲೇ ಟ್ರಂಪ್‌ಗೆ ಇರಾನ್​​ ಎಚ್ಚರಿಕೆ..!

ಇರಾನ್: ಇರಾನ್​​ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಪರಮಾಣು ಸೋರಿಕೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ದಾಳಿ ವೇಳೆ ಪರಮಾಣು ಸೋರಿಕೆಯಾಗಿಲ್ಲ, ಮೂರು ಪರಮಾಣು ಕೇಂದ್ರಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು ಹಾಗಾಗಿ ಯಾವುದೇ ಪರಮಾಣು ಸೋರಿಕೆ ಸಂಭವಿಸಿಲ್ಲ ಎಂದು ಇರಾನ್ ಹೇಳಿದೆ. ಹಾಗೆಯೇ ಅಮೆರಿಕ ತಮ್ಮ ಮೇಲೆ ನಡೆಸಿದ ದಾಳಿಯನ್ನು ಇರಾನ್ ಖಂಡಿಸಿದ್ದು, ಇಂತಹ ದಾಳಿಗಳು ವಿಶ್ವದ ಶಾಂತಿಗೆ ಅಪಾಯಕಾರಿ. ಅಮೆರಿಕವು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಹೇಳಿದೆ.

ಅಮೆರಿಕದ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದೆ. ನೀವು ದಾಳಿಯನ್ನು ಆರಂಭಿಸಿದ್ದೀರಿ ಆದರೆ ಇದನ್ನು ನಾವು ಅಂತ್ಯಗೊಳಿಸುತ್ತೇವೆ ಎಂದು ಸ್ಪಷ್ಟ ಎಚ್ಚರಿಕೆ ರವಾನಿಸಿದೆ. ಇರಾನ್‌ನ ಪರಮಾಣು ನೆಲೆಯಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯನ್ನು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ತೀವ್ರವಾಗಿ ಖಂಡಿಸಿದರು.