ಡೈಲಿ ವಾರ್ತೆ: 24/JUNE/2025

ಫೋರ್ತ್‌ಫೋಕಸ್‌ ಗೆ “2025ರ ಗಮನಾರ್ಹ ಸಂಸ್ಥೆ” ಪ್ರಶಸ್ತಿ: ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್‌

ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ಸ್ಥಾಪಿತವಾದ ಡಿಜಿಟಲ್ ಸೊಲ್ಯೂಶನ್ ಸಂಸ್ಥೆಯಾದ “ಫೋರ್ತ್‌ಫೋಕಸ್‌” ಗೆ ಬಿಸಿನೆಸ್ ಔಟ್‌ಲೈನ್ ಇತ್ತೀಚಿಗೆ ದೆಹಲಿಯಲ್ಲಿ ಆಯೋಜಿಸಿದ “ಬಿಸಿನೆಸ್ ಎಲೈಟ್ ಅವಾರ್ಡ್‌ 2025″ ಕಾರ್ಯಕ್ರಮದಲ್ಲಿ ಗಮನಹರಿಸಬಹುದಾದ ಅತ್ಯುತ್ತಮ ಸಂಸ್ಥೆ” ಪ್ರಶಸ್ತಿ ನೀಡಿ ಗೌರವಿಸಿದೆ.

ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ
ನಾವೀನ್ಯತೆಗೆ ಪ್ರೋತ್ಸಾಹ ನೀಡುವ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಂಸ್ಥೆಗಳನ್ನು ಪ್ರತಿ ವರ್ಷ ಗುರುತಿಸಿ ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಉದ್ಯಮದ ಮೇಲಿನ ಪರಿಣಾಮ, ನಾಯಕತ್ವದ ಗುಣ, ಬೆಳವಣಿಗೆ, ಸಾಮರ್ಥ್ಯಗಳ ಆಧಾರದಲ್ಲಿ ಪ್ರಶಸ್ತಿ ಪರಿಗಣಿಸಲಾಗುತ್ತದೆ.

8 ದೇಶಗಳಲ್ಲಿ ಸೇವೆ: ಫೋರ್ತ್‌ಫೋಕಸ್‌ ಸಂಸ್ಥೆಯು 2015ರಲ್ಲಿ ಪ್ರಾರಂಭವಾಗಿದ್ದು, ಸ್ಥಿರ ಸೇವಾ ದಕ್ಷತೆ ಮತ್ತು ಜಾಗತಿಕ ಗ್ರಾಹಕ ಜಾಲವನ್ನು ಈಗ 8ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿಸಿದೆ. ಅಲ್ಲದೆ 350ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುವ ಸಂಪೂರ್ಣ ಡಿಜಿಟಲ್ ಏಜೆನ್ಸಿಯಾಗಿ ಬೆಳೆದಿದೆ.

“ನಾವು ಸೃಜನಾತ್ಮಕತೆ ಮತ್ತು ತಂತ್ರಜ್ಞಾನವನ್ನು ಸಮನುಯಾಯವಾಗಿ ಬಳಸಿ ವ್ಯವಹಾರ ವೃದ್ಧಿಗೆ ಸಾಕ್ಷಿಯಾಗಲು ಮುಂದಾಗಿದ್ದೇವೆ. ಈ ಮಾನ್ಯತೆ ನಮ್ಮ ತಂಡದ ನಿರಂತರ ಶ್ರಮ ಮತ್ತು ದೃಢತೆಗಾಗಿ ಸಿಕ್ಕಿರುವ ಮಾನ್ಯತೆ”_ಎಂದು ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಹೇಳಿದರು.