



ಡೈಲಿ ವಾರ್ತೆ: 24/JUNE/2025


ಮಲ್ಪೆ| ದಶಕಗಳ ಹಿಂದೆ ಯೂಟ್ಯೂಬ್, ವಾಟ್ಸಪ್ ಗಳಲ್ಲಿ ಮಿಂಚಿದ ವೈರಲ್ ವಾಸು ಈಗ ಎಲ್ಲಿದ್ದಾರೆ.?, ಏನು ಮಾಡುತ್ತಿದ್ದಾರೆ? – ಇಲ್ಲಿದೆ ಮಾಹಿತಿ

ಮಲ್ಪೆ : ದಶಕದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಿಂಚಿದ, ವೈರಲ್ ವಾಸು ಇವಾಗ ಏನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ.
ಮಲ್ಪೆ ಯುಟ್ಯೂಬ್ ಮತ್ತು ವಾಟ್ಸಾಪ್ ಆರಂಭದ ದಿನಗಳಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ವಾಸು ಅನ್ನೋ ವ್ಯಕ್ತಿ ಮೊಬೈಲ್ ಬಳಕೆದಾರರಿಗೆ ಮೋಜಿನ ಸರಕು. ಮದ್ಯಪಾನಿ ವ್ಯಾಸನಿಯಾದ ವಾಸು ಕುಡಿದ ತಕ್ಷಣ ಅನೇಕ ನಟರ ಅನುಕರಣೆ ಮಾಡುವುದು ಹಾಡುವುದು ಆ ದಿನಗಳ ದಿನಚರಿ ಆತನದಾಗಿತ್ತು. ದುಡಿಯೋದು ಕುಡಿಯೋಕೆ ಅನ್ನೋ ಮಟ್ಟಕ್ಕೆ ಮಾತ್ರ ಅವರ ದುಡಿಮೆ. ಅವರ ವಿಚಿತ್ರ ವರ್ತನೆ ಕೆಲವರಿಗೆ ಹಾಸ್ಯದ ಸರಕಾಗಿ ಮೊಬೈಲ್ ಗಳಲ್ಲಿ ಆ ದೃಶ್ಯ ಸೆರೆಯಾಗಿ ವೈರಲ್ ಅದ ಪರಿಣಾಮ ವೈರಲ್ ವಾಸು ಅನ್ನೋ ಹೆಸರು ಫೇಮಸ್ ಆಗಿ ಬಿಟ್ಟಿತ್ತು. ಯಾರೂ ಕೂಡ ಆತನನ್ನು ಕುಡಿಯೋ ಚಟದಿಂದ,ತಿದ್ದೋ ಕೆಲಸ ಮಾಡದೇ ತಾವೇ ಆತನಿಗೆ ಸಾರಾಯಿ ಕುಡಿಸಿ ಮನರಂಜನೆ ತೆಗೆದು ಕೊಳ್ಳೋ ಮಟ್ಟದಲ್ಲಿ ಜನರ ಮನೋವಿಕಲತೆ ಮೆರೆದಿದ್ದರು. ಇದೀಗ ವಯೋಸಹಜ ಸಮಸ್ಯೆಯಿಂದ ದುಡಿಯಲು ಆಗದೆ ಕುಣಿಯಲು ಆಗದ ವೈರಲ್ ವಾಸು ಬೀದಿ ಪಾಲಾಗಿದ್ದರು.
ಸಮಾಜ ಸೇವಕ ವಿನಯ್ ಚಂದ್ರ ಸಾಸ್ತಾನ ಇವರು, ಸಾಲಿಗ್ರಾಮದ ತಮ್ಮ ಹೊಸ ಬದುಕು ಆಶ್ರಮದಲ್ಲಿ ಮತ್ತೆ ಹೊಸ ಜೀವನಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಊಟ ತಿಂಡಿ ಮಾಡಿದರೂ ಕೂಡ ವಾಸು ಅವರ ಹಾಸ್ಯದ ಗುಣ ಬದಲಾವಣೆ ಆಗಿಲ್ಲ. ಯೌವನದಲ್ಲಿ ದುಶ್ಚಟಕ್ಕೆ ಬಲಿಯಾಗದೆ ಇದ್ದಿದ್ದರೆ ಒಂದೊಳ್ಳೆ ಹಾಸ್ಯ ಕಲಾವಿದನಾಗಲು ವಾಸು ಅವರಿಗೆ ಖಂಡಿತ ಅವಕಾಶ ಇತ್ತು.