



ಡೈಲಿ ವಾರ್ತೆ: 29/JUNE/2025


ಕೋಟ ಸಿಎ ಬ್ಯಾಂಕ್ ಚುನಾವಣೆಯ ಮರು ಎಣಿಕೆ: 1ಮತದಿಂದ ಗೆದ್ದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾ ಗಾಣಿಗ ಅವರಿಗೆ ಸೋಲು, ಸಹಕಾರಿ ಮಿತ್ರ ತಂಡದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರೆಮಗಣೇಶ್ ರಿಗೆ 8 ಮತಗಳಿಂದ ಭರ್ಜರಿ ಗೆಲುವು

ಕೋಟ: ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆ ಜನವರಿ 19 2025ರಂದು ನಡೆದಿದ್ದು. ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು ತಂಡ ಮಹಿಳಾ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಪ್ರೇಮಗಣೇಶ್ ಅವರು ಕೇವಲ ಒಂದು ಮತದಿಂದ ಸೋಲನ್ನಪ್ಪಿದ್ದರು.
ಸೋತ ಅಭ್ಯರ್ಥಿ ಮರು ಎಣಿಕೆಗೆ ಕುಂದಾಪುರ AR ಕೋರ್ಟ್ ನಲ್ಲಿ ದಾವೆ ದಾಖಲಿಸಿದ್ದರು.
ಅದರಂತೆ 6 ತಿಂಗಳ ವಿಚಾರಣೆ ಬಳಿಕ ಉಚ್ಚ ನ್ಯಾಯಾಲಯ ಮರುಎಣಿಕೆ ಆದೇಶ ನೀಡಿ ಜೂ. 29 ರಂದು ಭಾನುವಾರ ಬೆಳಿಗ್ಗೆ ಮರು ಮತ ಎಣಿಕೆ ನಡೆದಿರುತ್ತದೆ.

ಅದರಲ್ಲಿ ಪ್ರತಿ ಸ್ಪರ್ಧಿ ಬೆಜೆಪಿ ಬೆಂಬಲಿತ ಅಭ್ಯರ್ಥಿ ಉಮಾ ಗಾಣಿಗ 2897 ಮತ ಗಳಿಸಿದ್ದು ಇವರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರೇಮಗಣೇಶ್ 2905 ಮತಗಳನ್ನು ಗಳಿಸಿ 8 ಮತಗಳ ಅಂತರ ದಿಂದ ಜಯ ಗಳಿರುತ್ತಾರೆ.

ಜಯಗಳಿದ ಅಭ್ಯರ್ಥಿ ಪ್ರೇಮ ಗಣೇಶ್ ಅವರಿಗೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಹಾಗೂ
ಸಹಕಾರಿ ಮಿತ್ರ ತಂಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.